ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ವಿಲವಿಲ ಒದ್ದಾಡುತ್ತಿರುವ ನಟ ದರ್ಶನ್ ಅವರಿಗೆ ಇದೀಗ ಹಳೆ ಕೇಸ್ಸಿನಿಂದ ದಾಸನಿಗೆ ಮತ್ತೊಂದು ಸಂಕಷ್ಟ ಬಂದು ಒದಗಿದಂತಾಗಿದೆ. ದರ್ಶನ್ ವಿರುದ್ಧ ಹಳೆಯ ಪ್ರಕರಣವೊಂದಕ್ಕೆ ಮರು ಜೀವ ದೊರಕಿದೆ. ಕೆಲ ವರ್ಷಗಳ ಹಿಂದೆ ದರ್ಶನ್, ಯುವ ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು. ಆ ಪ್ರಕರಣಕ್ಕೆ ಮತ್ತೆ ಮರು ಜೀವ ಸಿಕ್ಕಂತಿದೆ. 2022 ರಲ್ಲಿ ಪ್ರಕರಣ ದಾಖಲಾಗಿತ್ತು, ಈಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತಾಗಿ ಹೊಸದಾಗಿ ಎನ್ಸಿಆರ್ ದಾಖಲಾಗಿದೆ. ಇದನ್ನೂ ಓದಿ: ಆಧುನಿಕ ಜೀವನ ಶೈಲಿಯಿಂದ ಅನಾರೋಗ್ಯ ಹೆಚ್ಚಳ
ಯುವ ನಿರ್ಮಾಪಕ ಭರತ್ ಎಂಬುವರು ತಮಗೆ ಕರೆ ಮಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕರೆ ಮಾಹಿತಿ, ಕಾಲ್ ರೆಕಾರ್ಡ್ಗಳನ್ನು ಸಹ ಆಗ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು. 2022 ರಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎನ್ಸಿಆರ್ ದಾಖಲಾಗಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಅದೇನೆ ಆಗಲಿ ರೆಕ್ಕೆ ಮುರಿದ ಹಕ್ಕಿಯಂತೆ ಬಳ್ಳಾರಿ ಜೈಲ್ನಲ್ಲಿ ಒದ್ದಾಡುತ್ತಿರುವ ನಟ ದರ್ಶನ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.