ದರ್ಶನ್ ಪರ ಸಚಿವ ದರ್ಶನಾಪುರ ಬ್ಯಾಟಿಂಗ್..!

ದರ್ಶನ್ ಪರ ಸಚಿವ ದರ್ಶನಾಪುರ ಬ್ಯಾಟಿಂಗ್..!

ಶಹಾಪುರ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಜೈಲುಪಾಲಾಗಿದ್ದಾರೆ. ಈ ಪ್ರಕರಣದ ಬಗ್ಗೆ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಟಿವಿ ಮಾಧ್ಯಮದವರು ಸುಖ ಸುಮ್ಮನೆ ದರ್ಶನ್ ಬಗ್ಗೆಯೇ ತೊರಿಸುತ್ತಿದ್ದು ದರ್ಶನ ಕೊಲೆ ಮಾಡಿರುವುದನ್ನು ನೀವು ನೋಡಿದ್ದಿರಿಯೇ? ಈ ಪ್ರಕರಣದಲ್ಲಿ ಆರೋಪಿಯಾಗಿದ್ದು ಇನ್ನೂ ಯಾವುದು ಸಾಬೀತಾಗಿಲ್ಲ. ಮಾಧ್ಯಮದವರು ಎಲ್ಲಾ ವಿಷಯಗಳನ್ನು ಬಿಟ್ಟು ಪಾಪಾ.. ಕೇವಲ ದರ್ಶನ್ ಬಗ್ಗೆಯೇ ತೋರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದರ್ಶನ್ ಅಭಿಮಾನಿಗಳು ಸೋಶಿಯಲ್ ಮಿಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆದಿದ್ದು. ಸಚಿವರ ಹೇಳಿಕೆಯಿಂದ ದರ್ಶನ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿದಂತಾಗಿದೆ.

Related