ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಐದು ತಿಂಗಳಿನಿಂದ ಜೈಲು ಸೆರೆವಾಸ ಅನುಭವಿಸುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರಿಗೆ ಇಂದು ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇನ್ನು ದರ್ಶನ್ ಗೆ ಜಾಮೀನು ಮಂಜೂರಾಗಿರುವ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪ್ರತಿಕ್ರಿಯೆಸಿದ್ದಾರೆ. ಈ ಹಿಂದೆ ವಿಜಯಲಕ್ಷ್ಮಿ, ಅಸ್ಸಾಂನ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ರು. ಈ ದೇವಿಯ ಮಹಿಮೆಯಿಂದಲೇ ದರ್ಶನ್ಗೆ ಬೇಲ್ ಸಿಕ್ಕಿದೆ ಎನ್ನುವ ನಂಬಿಕೆಯಲ್ಲಿ ವಿಜಯಲಕ್ಷ್ಮಿ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನ ಸ್ಟೋರಿಸ್ನಲ್ಲಿ ವಿಜಯಲಕ್ಷ್ಮಿ ಗುವಾಹಟಿಯಲ್ಲಿರುವ ಶಕ್ತಿಪೀಠ ಕಾಮಾಕ್ಯ ದೇವಿ ದೇವಸ್ಥಾನದ ಫೋಟೋವನ್ನು ಶೇರ್ ಮಾಡಿದ್ದಾರೆ. ದೇವಿಗೆ ಧನ್ಯವಾದ ತಿಳಿಸಿದ್ದಾರೆ. ಥ್ಯಾಂಕ್ಫುಲ್, ಗ್ರೇಟ್ಫುಲ್, ನಿಮ್ಮ ಆಶೀರ್ವಾದ ಎಂದು ವಿಜಯಲಕ್ಷ್ಮಿ ಬರೆದಿದ್ದಾರೆ. ಇದನ್ನೂ ಓದಿ: ದಾಸನಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು
ವಿಜಯಲಕ್ಷ್ಮಿ ಅವರು, ದರ್ಶನ್ ಜೈಲು ಸೇರಿದ ದಿನದಿಂದಲೂ ಕಾನೂನು ಹೋರಾಟ ನಡೆಸಿದ್ರು. ಪತಿಗೆ ಬೇಲ್ ಸಿಕ್ಕಿ ಹೊರ ಬರುವ ದಿನಕ್ಕಾಗಿ ವಿಜಯಲಕ್ಷ್ಮಿ ಕಾಯ್ತಿದ್ರು. ಕೊನೆಗೂ ದರ್ಶನ್ ಪತ್ನಿಯ ಹೋರಾಟಕ್ಕೆ ಜಯ ಸಿಕ್ಕಿದ್ದು, ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.