ವೈದ್ಯರ ಶಿಫಾರಸಿನ ಮೇರೆಗೆ ದರ್ಶನ್ ಗೆ ದಿಂಬು ಬೆಡ್ಡಿನ ಭಾಗ್ಯ!

ವೈದ್ಯರ ಶಿಫಾರಸಿನ ಮೇರೆಗೆ ದರ್ಶನ್ ಗೆ ದಿಂಬು ಬೆಡ್ಡಿನ ಭಾಗ್ಯ!

ಬಳ್ಳಾರಿ: ಕೊಲೆ ಆರೋಪದಡಿ ಬಳ್ಳಾರಿ ಸೆಂಟ್ರಲ್ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಕಳೆದ ವಾರದಿಂದ ವಿಪರೀತ ಬೆನ್ನು ನೋವು ಕಾಡುತ್ತಿದೆ ಎಂಬ ಕಾರಣಕ್ಕೆ ವೈದ್ಯರು ಜೈಲಿಗೆ ಬಂದು ತಪಾಸನೆ ನಡೆಸಿ ರಿಪೋರ್ಟ್ ನೀಡಿದ್ದರು.

ದರ್ಶನ್ ಅವರಿಗೆ ಬಳ್ಳಾರಿ ಜೈಲ್ ನಲ್ಲಿ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿರುವ ಪರಿಣಾಮ ಇದೀಗ ದರ್ಶನ್ ಅವರಿಗೆ ಬೆಡ್ ಹಾಗೂ ತಲೆದಿಂಬನ್ನು ತರಿಸಿಕೊಡಲಾಗಿದೆ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.

ಹೌದು, ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ದರ್ಶನ್ ಗಾಗಿ ಜೈಲಿಗೆ ಹೊಸ ಕಾಟ್, ಬೆಡ್ ಹಾಗೂ ದಿಂಬು ಬಂದಿದೆ. ಮೊದಲೇ ಕೈ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್​ಗೆ ಇದೀಗ ಕೂರೋಕು, ಏಳೋಕು ಕಷ್ಟವಾಗ್ತಿದೆ ಎನ್ನಲಾಗ್ತಿದೆ. ಇದನ್ನೂ ಓದಿ: ಯತ್ನಾಳ್‌ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿ

ಇನ್ನು ವೈದ್ಯರ ಶಿಫಾರಸ್ಸಿನ ಮೇರೆಗೆ ಇದೀಗ ಮೆಡಿಕಲ್ ಬೆಡ್, ಕಾಟ್, ದಿಂಬು ನೀಡಲಾಗಿದೆಯಂತೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಮೆಡಿಕಲ್ ಬೆಡ್ ಹಾಗೂ ದಿಂಬು ಬಂದಿದೆ. ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ವೈದ್ಯರು ತಪಾಸಣೆ ನಡೆಸಿ ಬೆಡ್ ಹಾಗೂ ದಿಂಬಿ ನೀಡಲು ಶಿಫಾರಸ್ಸು ಮಾಡಿದ್ರು.

ಮೆಡಿಕಲ್ ವರದಿ ಬಂದ ಬಳಿಕ ಹಿರಿಯ ಅಧಿಕಾರಿಗಳಿಗೆ ವರದಿ ಕಳಿಸಿದ್ದ ಜೈಲು ಅಧೀಕ್ಷಕಿ ಲತಾ, ಇಂದು ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಬೆಡ್ ಹಾಗೂ ದಿಂಬಿನ ವ್ಯವಸ್ಥೆ ಮಾಡಿದರು ಎಂದು ತಿಳಿದು ಬಂದಿದೆ.

 

Related