ಸೈಬರ್ ವಂಚಕ ಪೊಲೀಸ್ ಅಂದರ್ ..!

  • In Crime
  • August 6, 2022
  • 972 Views
ಸೈಬರ್ ವಂಚಕ ಪೊಲೀಸ್ ಅಂದರ್ ..!

ದಾವಣಗೆರೆ, ಆಗಸ್ಟ್, 05: ಫ್ಲಿಫ್ ಕಾರ್ಟ್ ಪೇ ಲೇಟರ್ ಖಾತೆ ಹ್ಯಾಕ್ ಮಾಡುವ ಮೂಲಕ ಸೈಬರ್ ವಂಚನೆ ಮಾಡಿದ್ದ ರಾಜಸ್ಥಾನ ಮೂಲದ 23 ವರ್ಷದ ಅಮನ್ ತಿವಾರಿ ಎಂಬಾತನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಆರೋಫಿ ಅಮನ್ ತಿವಾರಿ ರಾಜಸ್ತಾನ ಮೂಲದ ಅಲ್ವಾರ ನಗರದವನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ತಿಂಗಳ ಕಾಲ ಆಪ್ ತರಬೇತಿ ಪಡೆದಿದ್ದ, ಈತ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗುತ್ತಿದ್ದ. ಈತ ಇದುವರೆಗೆ ಪೊಲೀಸ್ಕಣ್ತಪ್ಪಿಸಿ ಓಡಾಡುತ್ತಿದ್ದ. ಆದರೆ ದಾವಣಗೆರೆ ಪೊಲೀಸರು ರಾಜಸ್ತಾನಕ್ಕೆ ಹೋಗಿ ಕೊನೆಗೂ ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಅಮನ್ ತಿವಾರಿ ಸುಮಾರು 40 ಸಾವಿರದಷ್ಟು ಈಮೇಲ್ ಐಡಿಯ ಯೂಸರ್ ನೇಮ್, ಪಾಸ್ವರ್ಡ್ ಹ್ಯಾಕ್ ಮಾಡಿದ್ದ. ಈತ ಸುಮಾರು ಶೇಕಡಾ 47ರಷ್ಟು ಈಮೇಲ್ಗಳನ್ನು ಓಪನ್ ಮಾಡಿದ್ದಾನೆ. ಸೈಬರ್ ಬಳಸಿಕೊಂಡು ವಂಚನೆ ಮಾಡುತ್ತಾ ತಲೆಮರೆಸಿಕೊಂಡು ಓಡಾಡಿದ್ದು, ಕೊನೆಗೂ ದಾವಣಗೆರೆ ಪೊಲೀಸರು ಕಿರಾತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಪೊಲೀಸರ ಚಾಕಚಕ್ಯತೆಯಿಂದ ಆರೋಪಿ ಸಿಕ್ಕಿ ಬಿದ್ದಿದ್ದಾನೆ ಎಂದು ರಿಷ್ಯಂತ್ಮಾಹಿತಿ ನೀಡಿದರು.

Related