ಪಠ್ಯಪುಸ್ತಕ ಯಾವಾಗ ನೀಡ್ತೀರಾ ಸರ್ ಎಂದು ಸಿ.ಟಿ ರವಿಗೆ ಪ್ರಶ್ನಿಸಿದ SSLC ವಿದ್ಯಾರ್ಥಿಗಳು..!

ಪಠ್ಯಪುಸ್ತಕ ಯಾವಾಗ ನೀಡ್ತೀರಾ ಸರ್ ಎಂದು ಸಿ.ಟಿ ರವಿಗೆ ಪ್ರಶ್ನಿಸಿದ SSLC ವಿದ್ಯಾರ್ಥಿಗಳು..!

ಶಾಲೆ ಆರಂಭವಾಗಿ ಒಂದು ತಿಂಗಳುಕಳೆದರೂ ಸಮಾಜ ವಿಜ್ಞಾನ ಹಾಗೂ ಕನ್ನಡ ಪುಸ್ತಕ ನೀಡಿಲ್ಲ. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಆದಷ್ಟು ಬೇಗ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಯಾರ್ ಯಾರ ಹಣೆಯಲ್ಲಿ ಯೋಗ ಬರೆದಿರುತ್ತೆ ಅವರು ಸಿಎಂ ಆಗ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಲ್ಕೂರು ಗ್ರಾಮದಲ್ಲಿ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ಆಗಮಿಸಿದ್ದ ವೇಳೆ ಮುಂದಿನ ದಿನಗಳಲ್ಲಿ ಬಿ.ವೈ.ವಿಜಯೇಂದ್ರ ಸಿಎಂ ಆಗ್ತಾರೆ ಎಂಬ ಸಚಿವ ನಾರಾಯಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯೆಸಿದ ಅವರು ಯೋಗ ಬರೆದಿದ್ದರೆ ಯಾರೂ ಬೇಕಾದ್ರು ಸಿಎಂ ಆಗಬಹುದು ಎಂದರು. ಪ್ರತಾಪ್ ಸಿಂಹ ಪತ್ರಕರ್ತರಾಗಿದ್ದರು, ಯೋಗ ಇತ್ತು ಮೈಸೂರು ಸಂಸದರಾದರು. ಯೋಗ ಇದ್ದರೆ ಏನು ಬೇಕಾದ್ರು ಆಗಬಹುದು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಬೇಕು ಅಂತ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಯೋಗ ಕೂಡಿ ಬಂತು ಮುಖ್ಯಮಂತ್ರಿಯಾದರು ಎಂದು ಹೇಳಿದರು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ತೆರಳುತ್ತಿದ್ದ ಸಂದರ್ಭದಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಕೆಲ ಶಾಲೆಯ ವಿದ್ಯಾರ್ಥಿಗಳು ಸಿ.ಟಿ.ರವಿ ಭೇಟಿ ಮಾಡಲು ನಿಂತಿದ್ದರು. ಅವರ ಬಳಿ ಸಿ.ಟಿ.ರವಿ ಹೋಗುತ್ತಿದ್ದಂತೆ ಸರ್ ನಮಗೆ ಪುಸ್ತಕ ಯಾವಾಗ ಕೊಡ್ತೀರಿ? ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಹತ್ತನೇ ತರಗತಿ ವಿದ್ಯಾರ್ಥಿಗಳು ಪ್ರಶ್ನಿಸಿದರು.

Related