ಗ್ರಾ.ಪಂಯಲ್ಲಿ ಕೋಟಿ ಹಣ ಲೂಟಿ-ಲೋಕಾಯುಕ್ತಕ್ಕೆ ದೂರು

ಗ್ರಾ.ಪಂಯಲ್ಲಿ ಕೋಟಿ ಹಣ ಲೂಟಿ-ಲೋಕಾಯುಕ್ತಕ್ಕೆ ದೂರು

ಸಾವಳಗಿ : ಸಮೀಪದ ಅಡಿಹುಡಿ ಗ್ರಾ.ಪಯಲ್ಲಿ ಕೋಟಿ ಕೋಟಿ ಹಣವನ್ನು ಲಪಟಾಯಿಸಿ ಕಳಪೆ ಕಾಮಗಾರಿಯನ್ನು ಮಾಡಿ ಬಿಲ್ಲನ್ನು ಪಾಸ್ ಮಾಡಿದ್ದಾರೆ. ಕಾಮಗಾರಿ ನಡೆಯದೇ ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರ ಹೆಸರಿನಲ್ಲಿ ಎನ್‌ಎಂಆರ್ ಹಾಕಿ ಹಣವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಭುಜಂಗ ಗುಗ್ಗರಿ ಅವರು ಆರೋಪಿಸಿ ಸಾಕ್ಸಿ ಸಮೇತ ಲೋಕಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಗ್ರಾಮದ ಜನರ ಒಪ್ಪಿಗೆಯನ್ನು ಪಡೆಯದೆ ಗ್ರಾಮ ಸಭೆಯನ್ನು ನಡೆಸದೇ ಕಾನೂನುಬಾಹಿರವಾಗಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಕಾಮಗಾರಿಯನ್ನು ಕಳಪೆಯನ್ನಾಗಿ ಮಾಡಿ ಅದರ ಜೊತೆಗೆ ಕೆಲವೊಂದು ಕಾಮಗಾರಿಯನ್ನು ಮಾಡದೆ ಬಿಲ್ಲನ್ನು ತೆಗೆದಿದ್ದಾರೆ.  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಉಪವಿಭಾಗ ಜಮಖಂಡಿ ಮತ್ತು ಗ್ರಾ.ಪಂ ಅಡಿಹುಡಿ ಅಭಿವೃದ್ಧಿ ಅಧಿಕಾರಿಗಳು ಸೇರಿ ಒಂದೇ ಕಾಮಗಾರಿಗೆ ಎರಡು ಬಿಲ್ಲು ಪಾಸ್ ಮಾಡಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದಂತೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕೆಲವೊಂದು ಇಂಜಿನಿಯರ್‌ಗಳು ಕಾಮಗಾರಿ ಸ್ಥಳಕ್ಕೆ ಭೇಟಿ ಕೊಡದೆ ಕಾಮಗಾರಿಯನ್ನು ಪರಿಶೀಲಿಸದೆ ಕಾಮಗಾರಿಯನ್ನು ಅಳತೆ ಮಾಡದೆ ಕಾಮಗಾರಿ ಮಾಡಿದ ಸ್ಥಳಕ್ಕೆ ಭೇಟಿ ನೀಡದೆ ಕಮಿಷನ್ ಪಡೆದು ಕೋಟಿ ಲೂಟಿಯಲ್ಲಿ ಕೈಜೋಡಿಸಿದ್ದಾರೆ.
ಒಂದೇ ಕಾಮಗಾರಿಗೆ ಎರಡು ಎರಡು ಕಾಮಗಾರಿಯ ಆಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಹಣಮಂತ ಹರಿಜನ್ ಎರಡೇ ಎರಡು ತಿಂಗಳಲ್ಲಿ 91 ಲಕ್ಷ ರೂ. ಹಣವನ್ನು ಓಒಖ ಹಾಕಿ ಅಕ್ರಮವಾಗಿ ಹಣವನ್ನು ತೆಗೆದಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.

 

ಅದರ ಜೊತೆಗೆ ಪಿಆರ್‌ಡಿ ಜಮಖಂಡಿ ಇಲಾಖೆಯ ಎಇಇ ಆದಂತಹ ವಿ.ಎ. ಗೌಡರ ಅವರು ಸಹ ಕೇವಲ ಎರಡು ತಿಂಗಳಲ್ಲಿ 17 ಲಕ್ಷ ರೂ. ಹಣವನ್ನು ಎನ್‌ಎಮ್‌ಆರ್ ಹಾಕಿ ಬಿಲ್ಲನ್ನು ಪಾಸ್ ಮಾಡಿದ್ದಾರೆ. ಕ್ರಿಯಾಯೋಜನೆಯಲ್ಲಿನ ಬಹುತೇಕ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿದ್ದು ಎಲ್ಲಾ ಕಾಮಗಾರಿಗಳನ್ನು ಯಂತ್ರೋಪಕರಣಗಳಿಂದ ಮಾಡಿಸಿದ್ದಾರೆ ಎಲ್ಲ ಕಾಮಗಾರಿಗಳು ಕಾನೂನು ಬಾಹಿರವಾಗಿವೆ ಎಂದು ಗುಗ್ಗರಿ ಆರೋಪಿಸಿದ್ದಾರೆ.

ಅಡಿಹುಡಿ ಗ್ರಾ.ಪಂಯಲ್ಲಿನ ಭ್ರಷ್ಟಾಚಾರವನ್ನು ಗಮನಿಸಿದ ಭುಜಂಗ ಗುಗ್ಗರಿ ಅವರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹನುಮಂತ ಹರಿಜನ ಮತ್ತು ಜಿಲ್ಲಾ ಪಂಚಾಯತ್ ಉಪವಿಭಾಗ ಜಮಖಂಡಿಯ ಎಇಇ ವಿ.ಎ ಗೌಡರ್ ಅವರ ವಿರುದ್ಧ ಭ್ರಷ್ಟಾಚಾರದ ದಾಖಲೆಗಳ ಸಮೇತ ಕರ್ನಾಟಕ ಲೋಕಾಯುಕ್ತಕ್ಕೆ ಜು. 23 ರಂದು ದೂರು ಸಲ್ಲಿಸಿದ್ದಾರೆ.

ಪ್ರತಿಯೊಂದು ಗ್ರಾಮ ಪಂಚಾಯಿತಿ ಅಭಿವೃದ್ಧಿಯನ್ನು ಹೊಂದಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯು ಸಾರ್ವಜನಿಕರ ಪರವಾಗಿ ಕೆಲಸ ಮಾಡಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ನೀಗಿಸಲು ಎಂದೇ ಕೇಂದ್ರ ಸರ್ಕಾರ ನರೇಗ ಯೋಜನೆಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಅಂತದರಲ್ಲಿ ಜಮಖಂಡಿ ತಾಲ್ಲೂಕಿನ ಅಡಿಹುಡಿ ಗ್ರಾ.ಪಂಯಲ್ಲಿ ಭ್ರಷ್ಟಾಚಾರವು ಭುಗಿಲೆದ್ದಿದೆ ಎಂದು ಭುಜಂಗ ಗುಗ್ಗರಿ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

Related