ಕ್ರಿಕೆಟ್ ಪಂದ್ಯಾವಳಿ

ಕ್ರಿಕೆಟ್ ಪಂದ್ಯಾವಳಿ

ಮಹದೇವಪುರ, ಮಾ. 02:  ಕ್ರೀಡೆ, ಯೋಗ,  ವ್ಯಾಯಾಮಗಳಿಂದ ಮಾನಸಿಕ ಒತ್ತಡವನ್ನು ನಿಯಂತ್ರಣದ ಜೊತೆಗೆ ದೈಹಿಕ ದೃಡತ್ವ ಹಾಗೂ ಆರೋಗ್ಯಕರ ವಾಗಿರಬಹುದು ಎಂದು ಶಾಸಕ ಅರವಿಂದ್ ಲಿಂಬಾವಳಿ ತಿಳಿಸಿದರು.

ವೈಟ್ ಫಿಲ್ಡ್ ಇಮ್ಮಿಡಿಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಆವರಣದಲ್ಲಿ ಉತ್ತರ ಕರ್ನಾಟಕ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ನೇಹ ಪೂರ್ವಕ ಕ್ರಿಕೆಟ್ ಪಂದ್ಯಾವಳಿಯನ್ನು ಸಂಘದ ಅಧ್ಯಕ್ಷ ಅನೀಲ್ ಅಕಿವಾಟ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರೀಡೆಗಳಿಂದ ಮನುಷ್ಯನ ದೇಹವನ್ನು ಆರೋಗ್ಯವಾಗಿ ಮಾತ್ರವಲ್ಲದೇ ಮಾನಸಿಕ ಒತ್ತಡವನ್ನು ನಿಯಂತ್ರದಲ್ಲಿರಿಸಲು ಸಹಕಾರಿ ಯಾಗುತ್ತವೆ ಎಂದರು. ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಯೋಗ, ಕ್ರೀಡೆಗಳು ಮತ್ತು ವ್ಯಾಯಾಮ ಆಧಾರಿತ ಚಟುವಟಿಕೆಗಳು ಈಗಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಪ್ರತಿ ನಿತ್ಯ ಕನಿಷ್ಠ ಒಂದೆ ಗಂಟೆ ಸಮಯವನ್ನು ಕ್ರೀಡೆ, ಯೋಗ ಹಾಗೂ ವ್ಯಾಯಾಮಗಳಿಗೆ ಮೀಸಲಿಟ್ಟರೆ ಸಂಪೂರ್ಣ ಆರೋಗ್ಯವಂತ ರಾಗಿರಬಹುದು ಎಂದು ಸಲಹೆ ನೀಡಿದರು.

ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಾದೇವಪುರ ಕ್ಷೇತ್ರದಿಂದ 14 ಕ್ರಿಕೆಟ್ ತಂಡಗಳು ಭಾಗವಹಿಸಿದ್ದು ಪ್ರಥಮ ವಿಜೇತರಿಗೆ ಹತ್ತು ಸಾವಿರದ ಒಂದು ರೂ.ಗಳ ಹಣದ ಬಹುಮಾನ ಮತ್ತು ಟ್ರೋಫಿ, ದ್ವಿತೀಯ ವಿಜೇತರಿಗೆ 8001 ರೂ.ಗಳ ನಗದು ಬಹುಮಾನ ‌ಮತ್ತು ಟ್ರೋಫಿ ನೀಡಲಾಯಿತು ಎಂದು ಆಯೋಜಕ ಅನೀಲ್ ಅಕಿವಾಟ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹೇಂದ್ರ ಮೋದಿ, ಬಿಎನ್.ಪ್ರಕಾಶ್, ನವೀನ್ ಕುಮಾರ್, ಯೋಗೇಶ್ ಆರಾಧ್ಯ, ನಂಜೆ ಗೌಡ, ಸಂಘದ ಪಧಾದಿಕಾರಿಗಳಾದ ಪಂಚಾಕ್ಷರಯ್ಯ ಹಿರೇಮಠ, ಮಹಂತೇಶ್, ಅಶೋಕ್, ಸಿದ್ದಣ್ಣ, ಮಾರಪ್ಪ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

Related