ರಾಜ್ಯಕ್ಕೆ 4ನೇ ಅಲೆ : ಪತ್ತೆಯಾದ ಹೊಸ ಒಮಿಕ್ರಾನ್ ಉಪ ತಳಿ !

ರಾಜ್ಯಕ್ಕೆ 4ನೇ ಅಲೆ : ಪತ್ತೆಯಾದ ಹೊಸ ಒಮಿಕ್ರಾನ್ ಉಪ ತಳಿ !

ರಾಜ್ಯಕ್ಕೆ 4ನೇ ಅಲೆ ಕಾಲಿಟ್ಟೇ ಬಿಡ್ತಾ ಎನ್ನುವ ಅನುಮಾನ ಕಾಡುತ್ತಿದೆ. ಇದರ ನಡುವೆಯೇ ಒಮಿಕ್ರಾನ್ ವೈರಸ್‌ನ ಎರಡು ಉಪ ತಳಿಗಳು ರಾಜ್ಯದಲ್ಲಿ ಪತ್ತೆಯಾಗಿವೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಿಧಾನಕ್ಕೆ ಜಾಸ್ತಿಯಾಗುತ್ತಿದೆ. ಕೊರೋನ ಸೋಂಕಿತರ ಸಂಖ್ಯೆ ಹೀಗೆ ಏರುತ್ತಿರುವುದನ್ನು ನೋಡಿದರೆ ರಾಜ್ಯಕ್ಕೆ 4ನೇ ಅಲೆ ಕಾಲಿಟ್ಟೇ ಬಿಡ್ತಾ ಎನ್ನುವ ಅನುಮಾನ ಕಾಡುತ್ತಿದೆ. ಇದರ ನಡುವೆಯೇ ಒಮಿಕ್ರಾನ್ ವೈರಸ್‌ನ ಎರಡು ಉಪ ತಳಿಗಳು ರಾಜ್ಯದಲ್ಲಿ ಪತ್ತೆಯಾಗಿವೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ ವೈರಾಲಜಿಸ್ಟ್‌ಗಳು ಮುಂದಾಗಿದ್ದು, ಲಕ್ಷಣಗಳೇನು, ಎಷ್ಟು ಅಪಾಯಕಾರಿ ಎಂಬುದು ತಿಳಿಯಲಿದೆ. ಪತ್ತೆಯಾಯ್ತು 2 ಒಮಿಕ್ರಾನ್ ಉಪ ತಳಿಗಳು
ರಾಜ್ಯದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ನಿಧಾನವಾಗಿ ಏರಿಕೆ ಆಗ್ತಿದೆ.

ಈ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್​​ನ ಎರಡು ಉಪತಳಿಗಳು ಪತ್ತೆಯಾಗಿವೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್‌ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಈ ಉಪತಳಿ BA.2ನ ಸೀಕ್ವೆನ್ಸ್‌ಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಸೋಂಕಿತರಿಗೂ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆಯಂತೆ.

Related