52 ವರ್ಷ ಬಳಿಕ ವೃದ್ಧ ದಂಪತಿಯನ್ನು ಒಂದು ಮಾಡಿದ ಕೋರ್ಟ್..!

52 ವರ್ಷ ಬಳಿಕ ವೃದ್ಧ ದಂಪತಿಯನ್ನು ಒಂದು ಮಾಡಿದ ಕೋರ್ಟ್..!

ದಂಪತಿಗಳು ಇಳಿ ವಯಸ್ಸಿನಲ್ಲಿ ಕಾಂಪ್ರಮೈಸ್ ಆಗಿದ್ದಾರೆ. ಅದೂ ಸಹ 85ರ ವಯಸ್ಸಿನಲ್ಲಿ. ಕಲಘಟಗಿಯಲ್ಲಿ ನಡೆದ ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರು ದಂಪತಿಯನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ, ಜೂ 27 : ಇವರು ಸಂಸಾರ ಮಾಡೋ ವಯಸ್ಸಿನಲ್ಲಿ ಅದ್ಯಾವ ಕೆಟ್ಟ ಘಳಿಗೆಯಲ್ಲಿಯೋ ಡೈವರ್ಸ್ ತೆಗೆದುಕೊಂಡರು. ಗಂಡ-ಹೆಂಡತಿ ಒಂದಾಕೆ ಪ್ರಯತ್ನಗಳನ್ನೇ ಮಾಡಿರ್ಲಿಲ್ಲ. ಬದ್ದಗೆ ಗಂಡ ಕೊಡೋ ಜೀವನಾಂಶದ ಮೇಲೆ ಹೆಂಡತಿ ಬದುಕು ಸಾಗಿಸಿಕೊಂಡು ಹೊರಟಿದ್ದಳು.

ಇಂತಹ ವೃದ್ಧ ದಂಪತಿಗಳನ್ನು ನ್ಯಾಯಾಲಯ ಒಂದು ಮಾಡಿದೆ. 85 ರ ಇಳಿ ವಯಸ್ಸಿನಲ್ಲಿ ಈ ಜೋಡಿ ಒಂದಾಗಿ ಮನೆಯತ್ತ ಹೆಜ್ಜೆ ಹಾಕಿದೆ. ಯೌವ್ವನದಲ್ಲಿ ದೂರವಾಗಿದ್ರು, ವೃದ್ಧಾಪ್ಯದಲ್ಲಿ ಒಂದಾದ್ರು. ಅದೂ ಸಹ ರಾಜೀ ಪಂಚಾಯ್ತಿ ಮೂಲಕ. 52 ವರ್ಷ ದೂರ ಇದ್ದ ದಂಪತಿಗಳನ್ನು ಒಂದು ಮಾಡಿದ ಲೋಕ್ ಅದಾಲತ್. ಇಂಥದ್ದೊಂದು ಅಪರೂಪದ ಘಟನೆಗೆ ಸಾಕ್ಷಿಯಾದದ್ದು ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ನಡೆದ ಲೋಕ್ ಅದಾಲತ್ . ಹೀಗೆ ವೃದ್ಧಾಪ್ಯದಲ್ಲಿ ಒಂದಾದ ದಂಪತಿಗಳನ್ನು ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ (80) ಎಂದು ಗುರುತಿಸಲಾಗಿದೆ.

Related