18 ವರ್ಷದೊಳಗಿನವರಿಗೆ ಕೊರೊನಾ ಪರೀಕ್ಷೆ

18 ವರ್ಷದೊಳಗಿನವರಿಗೆ ಕೊರೊನಾ ಪರೀಕ್ಷೆ

ಬೆಂಗಳೂರು : ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಬಿಬಿಎಂಪಿ ಕಟ್ಟೆಚ್ಚರ ವಹಿಸಿದೆ. 18 ವರ್ಷ ಮೇಲ್ಪಟ್ಟವರೂ ಈಗಾಗಲೇ ಲಸಿಕೆ ಪಡೆದುಕೊಳ್ಳುತ್ತಿರುವುದರಿಂದ ನಾಳೆಯಿಂದ 18 ವರ್ಷದೊಳಗಿನವರಿಗೆ ಕೊರೊನಾ ಪರೀಕ್ಷೆ ನಡೆಸಲು ಅಧ್ಯತೆ ನೀಡಲು ತೀರ್ಮಾನಿಸಲಾಗಿದೆ.
ಪ್ರತಿನಿತ್ಯ ನಡೆಸುವ ಕೊರೊನಾ ಪರೀಕ್ಷೆಯಲ್ಲಿ ಶೇ.10 ರಷ್ಟು 18 ವರ್ಷದೊಳಗಿನವರಿಗೆ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ ಸರಿಸುಮಾರು ಒಂದೂವರೆ ಲಕ್ಷ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಕನಿಷ್ಟ ಪಕ್ಷ ದಿನನಿತ್ಯ 15 ಸಾವಿರಕ್ಕೂ ಹೆಚ್ಚು ಮಕ್ಕಳ ಪರೀಕ್ಷೆ ನಡೆಸಲು ಮಂಗಳವಾರ ಸೂಚಿಸಲಾಗಿದೆ.

ಮೂರನೇ ಅಲೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂಬ ತಜ್ಞರ ಸಲಹೆ ಮೇರೆಗೆ ಆಗಷ್ಟ್ ತೀಂಗಳಿನೊಳಗೆ ಗರಿಷ್ಠ ಕೊರೊನಾ ತಪಾಸಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಕೊರೊನಾ ತಪಾಸಣೆ ಕಾರ್ಯವನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗಿದ್ದು, ಈ ತಿಂಗಳಿನೊಳಗೆ ಸುಮಾರು 45 ಲಕ್ಷ ಮಂದಿಯ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆ ಸಂದರ್ಭದಲ್ಲಿ 18 ವರ್ಷದೊಳಗಿನ ಮಕ್ಕಳ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತಿದೆ.

Related