ಲಸಿಕೆ ಪಡೆದ ನಾಲ್ವರು ವೈದ್ಯರಿಗೆ ಕೊರೊನಾ

ಲಸಿಕೆ ಪಡೆದ ನಾಲ್ವರು ವೈದ್ಯರಿಗೆ ಕೊರೊನಾ

ಚಾಮರಾಜನಗರ : 7 ಮಂದಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ. ಮಹೇಶ್, ಸಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ. ಹರ್ಷ, ವೈದ್ಯರಾದ ಡಾ. ದಮಯಂತಿ, ಡಾ. ಗಿರೀಶ್ ಪಾಟೀಲ್, ಡಾ. ಶಶಾಂಕ್, ಡಾ. ನವೀನ್ಚಂದ್ರ, ಡಾ. ಚೇತನ್ 7 ದಿನಗಳಲ್ಲಿ ಕೋವಿಡ್ ಲಸಿಕೆ ಪಡೆದಿದ್ದರು.

ಕೋವಿಡ್ ಆಸ್ಪತ್ರೆಯ ನೋಡೆಲ್ ಅಧಿಕಾರಿ ಡಾ. ಮಹೇಶ್ ಪ್ರತಿದಿನ 90-100 ಪ್ರಕರಣಗಳಿದ್ದ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಕೋವಿಡ್ ಸೋಂಕು ತಗುಲಿರಲಿಲ್ಲ. ಈಗ ಕೋವಿಡ್ ಆಸ್ಪತ್ರೆಯಲ್ಲಿ ಮೂರ್ನಾಲ್ಕು ಪ್ರಕರಣಗಳಿರುವಾಗ ಕೋವಿಡ್ ಪಾಸಿಟಿವ್ ಆಗಿರುವುದು ವಿಪರ್ಯಾಸ.

ಕೋವಿಡ್ ಪಾಸಿಟಿವ್ ಆಗಿರುವ ಏಳು ಮಂದಿ ವೈದ್ಯರೂ ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಸೋಂಕು ಲಕ್ಷಣಗಳಿಲ್ಲ. ಓರ್ವ ವೈದ್ಯರು ಮಾತ್ರ ಮಗು ಮನೆಯಲ್ಲಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೆಲ್ಲರೂ ಹೋಂ ಐಸೋಲೇಷನ್ ಆಗಿದ್ದಾರೆ. ನಾಲ್ವರು ವೈದ್ಯರು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಪಡೆದಿದ್ದರು.

ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರೂ ಸೋಂಕು ತಗುಲಿರುವ ಬಗ್ಗೆ ಸ್ಪಷ್ಟೀಕರಣ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ. ಮಹೇಶ್, ನಾವು ಇದೀಗ ಕೋವಿಡ್ ಲಸಿಕೆ ಪಡೆದಿದ್ದೇವೆ. ಲಸಿಕೆಯ 2ನೇ ಡೋಸ್ ಪಡೆದ ಬಳಿಕವಷ್ಟೇ ಅದು ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಡೋಸ್ ಲಸಿಕೆ ಪಡೆದವರು ತಮಗೆ ಕೋವಿಡ್ ಬರುವುದಿಲ್ಲ ಎಂದು ಮೈಮರೆಯುಂತಿಲ್ಲ ಎಂದರು.

Related