ಜೀನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ

ಬೆಂಗಳೂರು ಮೇ 05: ಕೊರೋನಾ ರೂಪಾಂತರಿ ಸೋಂಕು ಪತ್ತೆ ಹಚ್ಚಲು ನಗರದ 34 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಕೊಳಚೆ ನೀರನ್ನು ಮೇ 5ರಿಂದ ಜೀನೋಮಿಕ್ ಸೀಕ್ವೆನ್ಸಿಂಗದ ಪರೀಕ್ಷೆಗೆ ಓಳಪಡಿಸಲು ಬಿಬಿಎಂಪಿ  ಆರೋಗ್ಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಕುರಿತು  ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ಕೆ.ವಿ.ತ್ರಲೋಕ್ ಚಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಕೊಳಚೆ ನೀರಿನ ಜೀನೋಮಿಕ್ ಪರೀಕ್ಷೆ ಬಗ್ಗೆ ಚರ್ಚಿಸಲಾಯಿತು.

ಕೋವಿಡ್ ಗಂಭೀರ ರೋಗ ಲಕ್ಷಣಗಳಿಲ್ಲದ ವ್ಯಕ್ತಿಯು ಬಳಸಿದ ನೀರಿನಲ್ಲಿಯೂ ಸೋಂಕು ಪತ್ತೆಯಾಗುತ್ತದೆ. ಹೀಗಾಗಿ ಪಾಲಿಕೆಯ 198 ವಾರ್ಡ್ ಗಳಲ್ಲಿನ ಕೊಳಚೆ ನೀರನ್ನು ಕೂಡ ಪರೀಕ್ಷೆ ಮಾಡಲಾಗುತ್ತದೆ. ಇದಕ್ಕೆ ಪಾಲಿಕೆಯು ಎಲ್ಲ ವಾರ್ಡ್ ಗಳ ಎಂಜಿನಿಯರ್ ಗಳು , ಆರೋಗ್ಯ ಪರಿವೀಕ್ಷಕರು ಹಾಗೂ ಜಲಮಂಡಳಿಯ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು. ಈ ಪರೀಕ್ಷೆಯಿಂದ ಕೋವಿಡ್ ಸೋಂಕು ರೂಪಾಂತರವಾದ ಬಗ್ಗೆ 15 ದಿನಗಳ ಮೊದಲೇ ತಿಳಿದುಕೊಳ್ಳುಲು ಸಾಧ್ಯ.

 

 

 

Related