ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ಮನವಿ: ಮುನಿಯಪ್ಪ

ಒಳ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ಮನವಿ: ಮುನಿಯಪ್ಪ

ನವದೆಹಲಿ: 30 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸೇರಿ ಏಳು ಜನ ನ್ಯಾಯಾಧೀಶರ ಒಳಗೊಂಡು ಮಹತ್ವದ ಪೀಠವು ತೀರ್ಪನ್ನು ನೀಡಿದ್ದು ಎಸ್ಸಿ ಎಸ್ಟಿ ಒಳಮೀಸಲಾತಿ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಹಾರ್ಥಿಕ, ಶೈಕ್ಷಣಿಕ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪನವರು ಹೇಳಿದರು.

ಇದು (ಮಂಗಳವಾರ ಆಗಸ್ಟ್‌ 13) ರಂದು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಿತ್ತು ಎಸ್ಸಿ ಸಮುದಾಯದ 101 ಉಪಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಬರುತ್ತದೆ ಇವರಿಗೆ ಸಮಾನವಾಗಿ ಮೀಸಲಾತಿಯನ್ನು ಹಂಚಲು ಸುಪ್ರೀಂ ಕೋರ್ಟ್ ಈ ಮಹತ್ವದ  ತೀರ್ಪನ್ನು ನೀಡಿದೆ. ಇದನ್ನೂ ಓದಿ:  ಅಕ್ಕಿ ಬದಲು ಎಣ್ಣೆ, ಬೇಳೆ, ಸಕ್ಕರೆ ಆಹಾರ ಸಾಮಗ್ರಿಗಳನ್ನು ವಿತರಿಸಲು ಚಿಂತನೆ: ಮುನಿಯಪ್ಪ

ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡಬಹುದಾಗಿದೆ ಒಳ ಮೀಸಲಾತಿಗಾಗಿ ಎಲ್ಲ ರಾಜ್ಯಗಳಲ್ಲೂ ಸಾಕಷ್ಟು ಹೋರಾಟ ಮಾಡಿದ್ದಾರೆ ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಕೂಡ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿದ್ದರು. ಪಂಜಾಬ್ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ವಾಲ್ಮೀಕಿ ದೋಬಿ ಸಮುದಾಯ ಬರುತ್ತದೆ ಧರ್ಮ ಯಾವುದೇ ಇರಲಿ ಜಾತಿ ಯಾವುದೇ ಇರಲಿ ಉಪಜಾತಿ ಯಾವುದೇ ಇರಲಿ ಅವರೆಲ್ಲರೂ ಸಮಾನರು ಅದೇ ಸಂವಿಧಾನ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮಾನತೆಗೆ ದೇಶಾದ್ಯಂತ ಹೋರಾಟ ನಡೆಸಲಾಯಿತು.

ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಅಧಿಕಾರ ಕೊಟ್ಟಿದೆ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ಮಾಡಿಕೊಡಿ ಎಂದು ಹೇಳಿದೆ. ಇದನ್ನು ಜಾರಿ ಮಾಡಬೇಕೆಂದು ರಾಜ್ಯ ಸರ್ಕಾರದಲ್ಲಿ ಮನವಿ ಮಾಡಿದ್ದೇನೆ ಸಮಾನತೆ ಕಾಣಬೇಕಾದರೆ ಒಳ ಮೀಸಲಾತಿಯು ಅನಿವಾರ್ಯವಾಗಿ ಜಾರಿಯಾಗಬೇಕು ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಅವರಲ್ಲಿ ಮನವಿ ಮಾಡಲಾಗುವುದು ಎಂದರು.

ಎಸ್ಸಿ ಎಸ್ಟಿ ಉಪ ವರ್ಗಗಳನ್ನು ವರ್ಗೀಕರಣ ಮಾಡುವುದರಿಂದ ಯಾವುದೇ ರಾಜ್ಯದಲ್ಲಿರುವ ಎಸ್ ಟಿ ವರ್ಗದವರಿಗೆ ಅನ್ಯಾಯವಾಗುವುದಿಲ್ಲ ಎಂದು ವರಿಷ್ಠರಿಗೆ ಮನವಿ ಮಾಡಲಾಗುವುದು ಆಯಾ ಜನಸಂಖ್ಯೆ ಆಧಾರದ ಮೇಲೆ ಕೊಡುವುದರಿಂದ ಇದನ್ನು ತೀರ್ಮಾನ ಕೈಗೊಂಡರೆ ಬಹಳಷ್ಟು ದಿನಗಳ ಹೋರಾಟಕ್ಕೆ ಪರಿಹಾರ ಸಿಗುತ್ತದೆ ಮತ್ತು ಸಮಾಜದಲ್ಲಿ ಸಮಾನತೆ ಕಾಣಬಹುದು ಎಂದು ಗಾಂಧೀಜಿ, ಬಸವಣ್ಣ ,ಅಂಬೇಡ್ಕರ್, ಅವರು ಹೇಳಿದ್ದಾರೆ ಆದ್ದರಿಂದ ಕಟ್ಟ ಕಡೆ ವ್ಯಕ್ತಿಗೆ ಸಾಮಾಜಿಕ ಆರ್ಥಿಕ ಶೈಕ್ಷಣಿಕವಾಗಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಇದರ ಭಾಗವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ ಅದರ ಕನಸು ನನಸಾಗಲು ಸಹಕಾರಿಯಾಗುತ್ತದೆ ಎಂದರು.

Related