ಕಾಂಗ್ರೆಸ್ ಗ್ಯಾರಂಟಿಗಳನ್ನು ಗಮನಿಸಬೇಕು ಸತೀಶ್ ರೆಡ್ಡಿ

ಕಾಂಗ್ರೆಸ್ ಗ್ಯಾರಂಟಿಗಳನ್ನು ಗಮನಿಸಬೇಕು ಸತೀಶ್ ರೆಡ್ಡಿ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಸತತ ನಾಲ್ಕು ಬಾರಿಯಾಗಿ ಗೆದ್ದಿರುವ ಶಾಸಕ ಸತೀಶ್ ರೆಡ್ಡಿ ಅವರು ಗುರುವಾರ ಸರ್ಕಾರಿ ಕಚೇರಿಗೆ ಪೂಜೆ ಮಾಡುವ ಮೂಲಕ ಮತ್ತೊಮ್ಮೆ ಆಡಳಿತವನ್ನು ಆರಂಭಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 16 ಸ್ಥಾನಗಳಲ್ಲಿ ಸಾರ್ವಜನಿಕರು ಆಶೀರ್ವಾದ ಮಾಡಿದ್ದರಿಂದ 16 ಶಾಸಕರು ಗೆದ್ದಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಗೆ ಗೆಲ್ಲಲು ಸಿದ್ದರಾಗಿರಬೇಕು. ಪಾಲಿಕೆಯ ಚುಕ್ಕಾಣಿಯನ್ನು ಹಿಡಿಯಲು ಪ್ರತಿಯೊಬ್ಬರು ವಾರ್ಡ್ ಮಟ್ಟದಲ್ಲಿ ಶ್ರಮಿಸಬೇಕೆಂದು ಸತೀಶ್ ರೆಡ್ಡಿ ಅವರು ನುಡಿದರು.

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದ್ದು  ಜನರಿಗೆ ಎಷ್ಟು ದಿನಗಳಲ್ಲಿ  ತಲುಪಿಸುತ್ತಾರೆ ಎಂದು ನಾವೆಲ್ಲ ಕಾಯುತ್ತಿದ್ದೇವೆ.

ಕಾಂಗ್ರೆಸ್ ಸರ್ಕಾರ ನೀಡಿರುವಂತಹ 5 ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ಜನರಿಗೆ ತಲುಪಿಸಲು ಆಗುವುದಿಲ್ಲ, ಏಕೆಂದರೆ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ 5 ಗ್ಯಾರಂಟಿಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗುತ್ತದೆ ಎಂದು ಈ ಸಂದರ್ಭದಲ್ಲಿ ಶಾಸಕ ಸತೀಶ್ ರೆಡ್ಡಿ ಅವರು ಹೇಳಿದರು.

2024ರಲ್ಲಿ ನಡೆಯಲಿರುವ ಎಂಪಿ ಚುನಾವಣೆಯ ಒಳಗಾಗಿಯಾದರೂ ಸಾರ್ವಜನಿಕರಿಗೆ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಎಷ್ಟರಮಟ್ಟಿನಲ್ಲಿ ತಲುಪಿಸುತ್ತದೆ ಎಂದು ನಾವು ಗಮನಿಸಬೇಕು ಎಂದರು

ಇನ್ನು ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆಯ ಸದಸ್ಯರುಗಳಾದ ಮಂಜುನಾಥ್ ರೆಡ್ಡಿ, ರವಿ ಪುರುಷೋತ್ತಮ್, ಮುರುಳಿಧರ್, ಜಲ್ಲಿ ರಮೇಶ್, ಮುನಿರಾಮ ಮತ್ತಿತರರು ಬಿಜೆಪಿ ಮುಖಂಡರು ಭಾಗವಹಿಸಿದ್ದರು.

Related