ಯುವಕರಿಗೆ ದ್ರೋಹ ಬಗೆದ ಸರಕಾರ : ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಶಿವಮೊಗ್ಗ: ತಿಹಾರ್ ಜೈಲಿಗಾದರೂ ಕಳುಹಿಸಲಿ, ಪರಪ್ಪನ ಅಗ್ರಹಾರಕ್ಕಾದರೂ ಕಳುಹಿಸಲಿ, ಎಲ್ಲಾದರೂ ಕಳುಹಿಸಲಿ. ನಾವು ಯಾರಿಗೂ ಆಜ್ಞೆ ಮಾಡೋಕೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸಚಿವ ಅಶ್ವತ್ಥ್ ನಾರಾಯಣ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ರಾಜ್ಯಕ್ಕೆ ಏನು ಅನ್ಯಾಯ ಮಾಡ್ತಿದ್ದಾರೆ. ಯುವಕರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಉಪಕುಲಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಲ್ಲಾ ಪರೀಕ್ಷೆಯ ಪೇಪರ್ ಲೀಕ್ ಆಯ್ತು. ಪ್ರತಿಯೊಂದು ನೇಮಕಾತಿಯಲ್ಲೂ ಹಗರಣ. ಹೆಚ್​ಡಿಕೆ ಸರ್ಟಿಫಿಕೇಟ್, ಪಾಸ್ ಮಾಡಿಸೋದು ಇವೆಲ್ಲಾ ದಂಧೆ ನಡೆಯುತ್ತಿದೆ ಅಂತ ಹೇಳಿದ್ದಾರೆ. ಅದು ಅವರ ಪಕ್ಷ. ಸರ್ಕಾರ ಇವುಗಳನ್ನು ಬಹಳ ಗೌಪ್ಯವಾಗಿ ಮುಚ್ಚುವಂತಹ ಪ್ರಯತ್ನ ನಡೆಸುತ್ತಿದೆ.


ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಶ್ವರಪ್ಪ ಏನು ಮಾಡಿಲ್ಲ ಅಂತ ಸರ್ಟಿಫಿಕೇಟ್ ಕೊಟ್ಟರು. ಎಲ್ಲರ ಮೇಲೆ ಅವರ ಪಕ್ಷದವರ ಮೇಲೆ ಮಾಡಿದ್ದಾರೆ ಅಂತ ಹೇಳೋಕೆ ಆಗುತ್ತಾ? ಮುಚ್ಚುವುದಕ್ಕೆ ಏನು ಬೇಕೋ ಅದಕ್ಕೆ ಪ್ರಯತ್ನ ಮಾಡಿ, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುತ್ತಿದ್ದಾರೆ. ಅಶ್ವತ್ಥ್ ನಾರಾಯಣ್​ ಫೋನ್ ಮಾಡಿರೋದು, ಅವರ ರಿಲೇಟಿವ್ ಕಲೆಕ್ಟ್ ಮಾಡಿರೋದು ಎಲ್ಲಾ ಈಚೆಗೆ ಬರುತ್ತದೆ. ಫಸ್ಟ್ ರ್ಯಾಂಕ್ ಅವನನ್ನು ಮಾತ್ರ ಒಳಗೆ ಹಾಕಿದ್ದಾರೆ. ಬೇರೆಯವರನ್ನು ಮಾತ್ರ ಹೊರಗೆ ಬಿಟ್ಟಿದ್ದಾರೆ. ಮಲ್ಲೇಶ್ವರಂಕ್ಷೇತ್ರದಲ್ಲಿ ಡಿಟೇಲ್ ಆಗಿ ತಂದುಕೊಟ್ಟಿದ್ದಾನೆ. ಅವರಿಗೋಸ್ಕರ ಒಂದು ಹೊಸ ಆರ್ಡರ್ ಮಾಡಿದ್ದಾರೆ ಎಂದರು.

Related