ಕರುನಾಡ ಮಹಾ ತೀರ್ಪು ಕೈ ಕಮಲ ಮಧ್ಯೆ ಪೈಪೋಟಿ

ಕರುನಾಡ ಮಹಾ ತೀರ್ಪು ಕೈ ಕಮಲ ಮಧ್ಯೆ ಪೈಪೋಟಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 2023 ನೆಯ ಸಾಲಿನ ವಿಧಾನಸಭಾ ಚುನಾವಣೆ ಮೇ ಹತ್ತರಂದು ಮತದಾನ ನಡೆದಿದ್ದು ಇಂದು ಶನಿವಾರ ಫಲಿತಾಂಶ ಹೊರಬೀಳಲಿದ್ದು ಎಲ್ಲಾ ಪಕ್ಷಗಳ ನಡುವೆ ಮಹಾ ಯುದ್ಧ ನಡೆಯುತ್ತಿದೆ

ಹೌದು, ಶನಿವಾರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ರಾಜ್ಯದಾದ್ಯಂತ ಆಡಳಿತಾರೂಢ ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಕೂಡ ತೀವ್ರ ಪೈಪೋಟಿ ನೀಡುತ್ತಿದೆ.

ಆರಂಭಿಕ ಟ್ರೆಂಡ್‌ಗಳ ಪ್ರಕಾರ ಬಿಜೆಪಿ 80, ಕಾಂಗ್ರೆಸ್ 122 ಮತ್ತು ಜೆಡಿಎಸ್ 19ರಲ್ಲಿ ಮುಂದಿವೆ.

ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯುತ್ತಿತ್ತು. 224 ಸದಸ್ಯ ಬಲದ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆದಿತ್ತು.

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸುಳಿವು ನೀಡಿದ್ದು, ಮುಂದಿನ ತಂತ್ರಗಳನ್ನು ಹೆಣೆಯುವಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿರತವಾಗಿವೆ.

 

Related