ಶಹಾಪುರ: ಕಲ್ಯಾಣ ಕರ್ನಾಟದಲ್ಲಿ ನಕಲಿ ಅಂಕಪಟ್ಟಿ ತಯಾರಿಸುವ ಮಾಫೀಯಾ ಆಳವಾಗಿ ಬೇರೂರಿದ್ದು, ಜಿಲ್ಲೆಯಲ್ಲಿ ನಕಲಿ ಅಂಕಪಟ್ಟಿ ಸಲ್ಲಿಕೆ, ಸರ್ಕಾರದಿಂದ ನಕಲಿ ಸಹಿ ಮಾಡಿಕೊಂಡು ಹುದ್ದೆ ಪಡೆದು ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ತಾಲೂಕಿನ ಸಗರ, ದೋರನಹಳ್ಳಿ, ವನದುರ್ಗ, ಸುರಪುರ, ಹೇಮನೂರ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ 14 ಜನ ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ಸಲ್ಲಿಸಿ ಡಿ ಗ್ರೂಪ್ ಹುದ್ದೆ ಗಿಟ್ಟಿಸಿಕೊಂಡಿದ್ದು ಕೂಡಲೇ 14 ಜನರನ್ನು ಬಂಧಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಆಗ್ರಹಿಸಿದ್ದಾರೆ.
14 ಜನರಲ್ಲಿ ಬಹುತೇಕರು ಜೇವರ್ಗಿ, ಅಫಜಲಪುರ ಮೂಲದವರಾಗಿದ್ದು ಓರ್ವ ಮಾತ್ರ ತಾಲೂಕಿನ ಮದ್ರಕಿ ಗ್ರಾಮದವನಾಗಿದ್ದಾನೆ. ನಕಲಿ ಮಾರ್ಕ್ಸ್ ಕಾರ್ಡ್ ಸಲ್ಲಿಸಿ 2015 ರಲ್ಲಿ ಉದ್ಯೋಗ ಗಳಿಸಿಕೊಂಡ 14 ಉದ್ಯೋಗಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲಾ ಇನ್ನೂ ವಿವಿಧ ಇಲಾಖೆಗಳಲ್ಲಿ ಸಹ ಇಂಥದ್ದೆ ಕಳ್ಳಾಟಾ ನಡೆಯುತ್ತಿದ್ದು ಸರ್ಕಾರದ ಮಟ್ಟದಿಂದಲೇ ನಕಲಿ ಸಹಿಗಳನ್ನು ಸಹ ತಾವೇ ಹಾಕಿಕೊಂಡು ಉದ್ಯೋಗ ಪಡೆದು ಕೊಂಡಿದ್ದಾರೆ. ವಿವಿಧ ಇಲಾಖೆಗಳಲ್ಲಿ ಕೇಲವು ಅಭ್ಯರ್ಥಿಗಳು ಉದ್ಯೋಗ ಇಲಾಖೆ ಸಿಬ್ಬಂದಿ, ಮತ್ತು ನಕಲಿ ಅಂಕಪಟ್ಟಿ ತಯಾರಿಸುವ ಜಾಲದ ಮೂಲಕ ಅಂಕಪಟ್ಟಿ ಪಡೆದುಕೊಂಡ ಉದ್ಯೋಗ ಪಡೆದಿರುವ ಅನುಮಾನ ವ್ಯಕ್ತವಾಗುತ್ತಿವೆ. ನಕಲಿ ಅಂಕಪಟ್ಟಿ ನೀಡಿ ಸರ್ಕಾರಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಇವರ ವಿರುದ್ಧ ದೂರು ದಾಖಲಿಸಬೇಕು ಮತ್ತು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕಿದೆ. ಇದನ್ನೂ ಓದಿ: ಕಂದಾಯ ದಾಖಲೆಗಳ ಗಣಕೀಕರಣಕ್ಕೆ ಚಾಲನೆ
14 ಜನ ಒಂದೇ ಕಡೆ ಅಂಕಪಟ್ಟಿ ಪಡೆದಿರುವ ಅನುಮಾನ
ಇನ್ನು 14 ಜನರು ಸಹ ಇಲ್ಲಿಯವರೇ ಆಗಿದ್ದು ಒಬ್ಬರಿಂದ ಒಬ್ಬರಿಗೆ ಲಿಂಕ್ ಮೂಲಕ ಅಂಕಪಟ್ಟಿ ಪಡೆದುಕೊಂಡಿರುವ ಶಂಕೆ ಇದ್ದು ತಮ್ಮ ಜಿಲ್ಲೆ, ತಾಲೂಕಗಳಲ್ಲಿ ಕೆಲಸ ಮಾಡಿದರೆ ಅನುಮಾನ ಮೂಡುತ್ತದೆ ಎಂದು ಅರಿತು, ಎಲ್ಲಾರೂ ಶಹಾಪುರ ಮತ್ತು ಸುರಪುರ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಾದ ನಕಲಿ ಅಂಕಪಟ್ಟಿ, ಸಹಿ ಜಾಲ..!
ಈಗಾಗಲೇ ಕೆಂಭಾವಿ ಪುರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರುಣ್ ಚವ್ಹಾಣ ವಿರುದ್ಧ ದೂರು ದಾಖಲಾಗಿದೆ. ಆದರೂ ಕ್ರಮ ಆಗುತ್ತಿಲ್ಲಾ. ಇದರಿಂದ ಜನರು ಇಲಾಖೆ ಮೇಲೆ ನಂಬಿಕೆ ವಿಶ್ವಾಸ ಕಳೆದು ಕೊಳ್ಳುತ್ತಿರುವುದು ಸುಳ್ಳಲ್ಲಾ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ಧೇಶನಾಲಯ ನಿರ್ಧೇಶಕರು ಆಯುಕ್ತಾಲಯದ ವಿಶೇಷ ನೇಮಕಾತಿ ಸಮಿತಿಯು 17/01/2015 ರಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನೀಡಿ ಆಯ್ಕೆಯಾದ ಗ್ರೂಪ್ ಡಿ ಹುದ್ದೆಯನ್ನು ಪಡೆದ ಸಿಬ್ಬಂದಿಗಳ ವಿಚಾರಣೆ ಕೈಗೊಳ್ಳಲು 31/8/24 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ವಿಚಾರಿಸಲು ಡಿಎಚ್‌ಓ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲಾ.
ನಕಲಿ ಅಂಕಪಟ್ಟಿ ಸಲ್ಲಿಸಿದ ಖದೀಮರು
ಶಿವಕುಮಾರ ಬಿರೆದಾರ (ಪ್ರಾ,ಆ.ಕೇ ಸಗರ), ಅಕ್ಕನಾಗಮ್ಮ(ಪ್ರಾ.ಆ.ಕೆ ದೋರನಹಳ್ಳಿ), ಅಜೆಯಾ ತಂದೆ ಶಿವನಂದ (ಪ್ರಾ.ಆ.ಕೇ ಸಗರ), ಸುರೇಶ ತಂದೆ ಸಿದ್ದಯ್ಯ(ಪ್ರಾ.ಆ.ಕೇ ಹೇಮನೂರ), ಶಿವರಾಜ ತಂದೆ ಸಿದ್ರಾಮಪ್ಪ(ಪ್ರಾ.ಆ.ಕೇ ದೋರನಹಳ್ಳಿ), ಈಶ್ವರಪ್ಪ ತಂದೆ ಭೀಮಯ್ಯ ( ಪ್ರಾ.ಆ.ಕೇ ದೋರನಹಳ್ಳಿ), ನಿತ್ಯಾನಂದ ಗುಡೂರು( ಪ್ರಾ.ಆ,ಕೇ ದೋರನಹಳ್ಳಿ), ರಾಘವೇಂದ್ರ ತಂದೆ ಶಂಕರ ಬಡಿಗೇರ( ಪ್ರಾ.ಆ.ಕೇ ದೋರನಹಳ್ಳಿ), ಮಲ್ಲಿಕಾರ್ಜುನ ತಂದೆ ಗುರುಪಾದ(ಸಾರ್ವಜನಿಕ ಆಸ್ಪತ್ರೆ ಶಹಾಪುರ), ಮಲ್ಲಿನಾಥ ತಂದೆ ಪ್ರೇಮನಗೌಡ(ಸಾರ್ವಜನಿಕ ಆಸ್ಪತ್ರೆ ಶಹಾಪುರ), ಶಿವುಕುಮಾರ ತಂದೆ ಗುರುನಾಥ( ಪ್ರಾ,ಆ. ಕೇ ವನದುರ್ಗ), ಬಸಲಿಂಗಪ್ಪ ತಂದೆ ಶರಣಪ್ಪ (ಸಾರ್ವಜನಿಕ ಆಸ್ಪತ್ರೆ ಸುರಪುರ), ಜಗದೀಶ ತಂದೆ ಸೂರ್ಯಕಾಂತ (ಸಾರ್ವಜನಿಕ ಆಸ್ಪತ್ರೆ ಶಹಾಪುರ), ರೇಣುಕಾ ಅಂಬಣ್ಣ (ಸಾರ್ವಜನಿಕ ಆಸ್ಪತ್ರೆ ಶಹಾಪುರ).
ಸಂಭಂಧಿತ ಸಂಸ್ಥೆಯ ಆಡಳಿತ ವೈದ್ಯಧಿಕಾರಿಗಳು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಡಾ.ರಮೇಶ ಗುತ್ತೇದಾರ ಟಿಎಚ್‌ಓ ರವರು ತಿಳಿಸಿದ್ದಾರೆ.