ನಿರಾಶ್ರಿತರಿಗೆ ಸಿಎಂ ಸೂರಿನ ಭರವಸೆ

ನಿರಾಶ್ರಿತರಿಗೆ ಸಿಎಂ ಸೂರಿನ ಭರವಸೆ

ಮೈಸೂರು : ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮುಂದಿನ ಮೂರು ದಿನಗಳ ಒಳಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ನೆರೆ ವಿಚಾರವಾಗಿ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ ಎಂದು ಮಾಹಿತಿ ನೀಡಿದ ಸಿಎಂ, ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ. ಈಗಾಗಲೇ ನೆರೆ ಕಂಡುಬಂದ ಪ್ರದೇಶದಲ್ಲಿ ನಮ್ಮ ಸಚಿವರು ಹೋಗಿದ್ದಾರೆ. ಮತ್ತಷ್ಟು ಸಚಿವರು ಮುಂದಿನ ದಿನಗಳಲ್ಲಿ ತೆರಳುತ್ತಾರೆ. ನಮ್ಮ ಸರ್ಕಾರ ಜನರ ಜೊತೆ ಇದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

Related