ಸಿಎಂ ಆಯ್ಕೆ ಅಂತಿಮವಾಗಿಲ್ಲ ಸುಳ್ಳುಸುದ್ದಿಗೆ ಕಿವಿ ಕೊಡಬೇಡಿ: ಸುರ್ಜೇವಾಲ

ಸಿಎಂ ಆಯ್ಕೆ ಅಂತಿಮವಾಗಿಲ್ಲ ಸುಳ್ಳುಸುದ್ದಿಗೆ ಕಿವಿ ಕೊಡಬೇಡಿ: ಸುರ್ಜೇವಾಲ

ನವದೆಹಲಿ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಊಹಾಪೋಹಗಳ ಹರಿದಾಡುತ್ತಿದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಸುಳ್ಳುಸುದ್ದಿಗೆ ಕಿವಿ ಕೊಡಬೇಡಿ. ಇನ್ನು 48 ಗಂಟೆ ಒಳಗಾಗಿ ಹೊಸ ಸಿಎಂ ಆಯ್ಕೆಯನ್ನು ಮಾಡಲಿದ್ದೇವೆ ಎಂದು ಬುಧವಾರ ದೆಹಲಿಯಲ್ಲಿ ಕೆಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 48 ಗಂಟೆಯೊಳಗೆ ಹೊಸ ಸಿಎಂ ಆಯ್ಕೆಯಾಗಲಿದ್ದು, 72 ಗಂಟೆಯೊಳಗೆ ಹೊಸ ಸಂಪುಟ ರಚನೆಯಾಗಲಿದೆ ಕಾಂಗ್ರೆಸ್ ನೀಡಿದ ಎಲ್ಲಾ ಗ್ಯಾರೆಂಟಿಗಳು ಅನುಷ್ಠಾನಕ್ಕೆ ಬರಲಿವೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಬುಧವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ, ಸುಳ್ಳುಸುದ್ದಿಗಳಿಗೆ ಯಾರೂ ಕಿವಿ ಕೊಡಬೇಡಿ ಕರ್ನಾಟಕದಲ್ಲಿ ಮುಂದಿನ ಐದು ವರ್ಷ ಸ್ಥಿರ ಸರಕಾರ ರಚಿಸುತ್ತೇವೆ. ಜನರ ಆಶೋತ್ತರಗಳನ್ನು ಈಡೇರಿಸಿ ಬದಲಾವಣೆ ತರಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹೆಸರನ್ನು ಘೋಷಿಸಲಿದ್ದಾರೆ. ನಾವು ಅವಿರೋಧವಾಗಿ ನಾಯಕನ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಸೋಲಿನ ಹತಾಶೆಯಿಂದ ಬಿಜೆಪಿಯವರು, ಕೆಲ ಮಾಧ್ಯಮಗಳು ಗಾಳಿಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಜನತೆ ಯಾವುದನ್ನೂ ನಂಬಬಾರದು ಎಂದು ಮನವಿ ಮಾಡಿದರು.

Related