ಸೀಳು ಕೂದಲಿನ ಸಮಸ್ಯೆ?

ಸೀಳು ಕೂದಲಿನ ಸಮಸ್ಯೆ?

ಮನೆಮದ್ದು: ಆಕರ್ಷಕ ಕೇಶರಾಶಿ, ಮನಮೋಹಕ ಉದ್ದನೆಯ ಜಡೆ, ಸಿಕ್ಕುಗಟ್ಟದ ರೇಷ್ಮೆ ಎಳೆಯಂಥಹ ಸುಂದರ ತಲೆಕೂದಲು, ದಪ್ಪನೆಯ, ಬಿಗಿಯಾದ ಕೇಶವನ್ನು ಹೊಂದಬೇಕು ಅನ್ನೋದು ಬಹುತೇಕ ಹೆಣ್ಣು ಮಕ್ಕಳ ಕನಸ್ಸು. ಅದರಲ್ಲೂ ಇದ್ದಕ್ಕಿದ್ದಂತೆ ಕೂದಲು ಬಿಗಿ ತನವನ್ನು ಕಳೆದುಕೊಳ್ಳಲು ಆರಂಭಿಸಿದಾಗ ಗಂಭೀರವಾಗಿ ಯೋಚಿಸಲೇಬೇಕಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಉಂಟಾಗುವ ವ್ಯತ್ಯಾಸವಿರಬಹುದು, ಇಲ್ಲವೇ ತಲೆಕೂದಲಿಗೆ ಕಾಲಕ್ಕೆ ತಕ್ಕಂತ ಆರೈಕೆ ಸಿಗದೇ ಇರಬಹುದು, ಅನುವಂಶೀಯವವಾಗಿ ಕೂದಲುದುರುವುದು ಪ್ರಾರಂಭವಾಗಿರಬಹುದು.

ಹೇರ್ಫಾಲ್ಗೆ ಇನ್ನೂ ಬಹು ಮುಖ್ಯ ಕಾರಣ ಅಂದ್ರೆ ಹಾರ್ಮೋನ್ ಅಸಮತೋಲವಿರಬಹುದು.  ಹೀಗೆ ಉದುರುತ್ತಿರುವ ಕೇಶರಾಶಿಯನ್ನು ಕಾಪಾಡಿಕೊಳ್ಳಲು ಕಂಡ ಕಂಡ ಎಣ್ಣೆಯನ್ನು ಹಚ್ಚಿ ಕೂದಲು ಇನ್ನಷ್ಟು ಡ್ಯಾಮೇಜ್ ಆಗಿರಬಹುದು. ಹೇರ್ ಕಲರಿಂಗ್, ಹೇರ್ ಸ್ಟ್ರೈಟನಿಂಗ್ ಕಲರಿಂಗ್ನಿoದ ಹೀಟ್ ಜಾಸ್ತಿಯಾಗಿ ಹೇರ್ಫಾಲ್ ಆರಂಭವಾಗಿರಬಹುದು.

ಹಾಗಾದ್ರೆ ನೀವು ಕೂಡ ಇದೇ ರೀತಿಯಾದ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮಗೆ ನಾವು ಸರಳವಾದ ಮನೆಮದ್ದನ್ನು ಹೇಳಿಕೊಡುತ್ತೇವೆ. ಕೇಶದ ಬೆಳವಣಿಗೆ ಮತ್ತು ಹೇರ್ಫಾಲ್ ತಡೆಯಲು ಈ ಮನೆ ಮದ್ದು ಉಪಯುಕ್ತ. ಈ ಮನೆಮದ್ದು ಮಾಡಿಕೊಳ್ಳಲು ಬೇಕಾಗಿರುವ ಸಾಮಗ್ರಿಗಳು ಈ ರೀತಿ ಇವೆ.

ಸಾಮಗ್ರಿಗಳು: ಎಸಳು ಕರಿಬೇವಿನ ಎಲೆಗಳು, ಎಸಳು ಬೇವಿನ ಎಲೆಗಳು, ಚಮಚ ಕೊಬ್ಬರಿ ಎಣ್ಣೆ, ಚಮಚ ಹರಳೆಣ್ಣೆ

ಮೊದಲಿಗೆ ಕರಿಬೇವಿನ ಎಲೆಗಳನ್ನು ಬಿಡಿಸಿಟ್ಟುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದೇ ರೀತಿ ಬೇವಿನ ಎಲೆಗಳನ್ನು ಸಹ ತೊಳೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಬೇಕು. ಇದಕ್ಕೆ ಸ್ವಲ್ಪವೇ ನೀರು ಸೇರಿಸಿ ರುಬ್ಬಿಕೊಳ್ಳಬೇಕು. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು ಸೋಸಿಕೊಳ್ಳಬೇಕು. ಇದಕ್ಕಾಗಿ ಯಾವುದಾದರೂ ಶುದ್ಧವಾದ ತೆಳುವಾದ ಕಾಟನ್ ಬಟ್ಟೆಯನ್ನು ಬಳಸಿ ಅಥವಾ ಮಲ್ ಕಾಟನ್ ಹೆಚ್ಚು ಸೂಕ್ತ. ಈಗ ರುಬ್ಬಿಕೊಂಡ ಮಿಶ್ರಣವನ್ನು ಬಟ್ಟೆಯ ಸಹಾಯದಿಂದ ಹಿಂಡಿಕೊoಡು ರಸವನ್ನು ಸಂಗ್ರಹಿಸಿಕೊಳ್ಳಬೇಕು.

ಹೀಗೆ ಸಂಗ್ರಹವಾದ ಬೇವು ಮತ್ತು ಕರಿಬೇವಿನ ರಸಕ್ಕೆ ಒಂದು ಸ್ಪೂನ್ ತೆಂಗಿನ ಎಣ್ಣೆ ಹಾಕಿಕೊಳ್ಳಬೇಕು. ಹಾಗೇಯೇ ಒಂದು ಸ್ಪೂನ್ ಹರಳೆಣ್ಣೆಯನ್ನು ಹಾಕಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಒಂದು ಸ್ಪೂನ್ನಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಸೊಪ್ಪಿನ ರಸ ಮತ್ತು ಎಣ್ಣೆ ಸರಿಯಾಗಿ ಮಿಶ್ರಣವಾದ ಬಳಿಕ ಇದನ್ನು ಕೂದಲಿಗೆ ಹಚ್ಚಿಕೊಳ್ಳಬಹುದು. ಮೊದಲಿಗೆ ಸ್ಕಾಲ್ಪ್ ಗೆ ಈ ಮಿಶ್ರಣವನ್ನು ಹಚ್ಚಬೇಕು. ನಂತರ ಕೂದಲಿಗೆ ಹಚ್ಚಿಕೊಳ್ಳಬೇಕು. ಇದು ಸೀಳು ಕೂದಲಿನ ಸಮಸ್ಯೆಗೆ ಪ್ರಯೋಜನಕಾರಿ. ಹೀಗೆ ಸಂಪೂರ್ಣವಾಗಿ ಕೂದಲಿಗೆ ಹಚ್ಚಿಕೊಂಡ ಮೇಲೆ ಒಂದು ಪೋನಿ ಟೇಲ್ ಇಲ್ಲವೇ ಒಂದು ಬನ್ ಕಟ್ಟಿಕೊಳ್ಳಬೇಕು.
ನಂತರ ಒಂದು ಗಂಟೆ ಇದನ್ನು ನೆನೆಯಲು ಬಿಡಿ. ನಂತರ ಒಂದು ಮೈಲ್ಡ್ ಶ್ಯಾಂಪು ಬಳಸಿ ಸ್ನಾನ ಹೇರ್ವಾಶ್ ಮಾಡಿಕೊಳ್ಳಬೇಕು.

ಈ ರೀತಿ ವಾರಕ್ಕೊಮ್ಮೆಯಾದರೂ ಮನೆಮದ್ದನ್ನು ಮಾಡಿಕೊಂಡರೆ ಖಂಡಿತವಾಗಿಯೂ ಬಹಳ ಬೇಗ ಕೂದಲಿನ ಬೆಳವಣಿಗೆಯಾಗುತ್ತದೆ. ಅಲ್ಲದೇ ಎಲ್ಲಾ ರೀತಿಯ ಕೇಶರಾಶಿಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

Related