ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನೇನು ಕ್ಷಣಗಳನ್ನು ಪ್ರಾರಂಭವಾಗಿದ್ದು ಈ ಬಾರಿ ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿರುವ ಗಣೇಶವನ್ನು ಎಲ್ಲರೂ ಮನೆಯಲ್ಲಿ ಮತ್ತು ವಠಾರದಲ್ಲಿಟ್ಟು ಪೂಜೆ ಮಾಡಿ ಸಂಭ್ರಮಿಸಬೇಕೆಂದು ಈಗಾಗಲೇ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ಇಂದು (ಗುರುವಾರ ಸೆಪ್ಟೆಂಬರ್ 05) ರಂದು ಜಯನಗರ ವಿಧಾನಸಭಾ ಕ್ಷೇತ್ರ ಬಾಂಧವ ಎನ್. ನಾಗರಾಜು ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರು ಎಲ್.ಐ.ಸಿ ಕಾಲೋನಿ ಉದ್ಯಾನವನ, 2ನೇ ಕ್ರಾಸ್, ಜಯನಗರ ಮಣ್ಣಿನ ಗಣೇಶನನ್ನೆ ಪೂಜಿಸೋಣ… ಪರಿಸರ ಮಾಲಿನ್ಯ ತಡೆಗಟ್ಟೋಣ ಬನ್ನಿ.. ಎಂಬ ಕಾರ್ಯಕ್ರಮದ ಮೂಲಕ ಸಾರ್ವಜನಿಕರಿಗೆ ಜೇಡಿಮಣ್ಣಿನಿಂದ ತಯಾರಿಸಿದ ಹಲವಾರು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿತರಿಸಿದರು. ಇದನ್ನೂ ಓದಿ: ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಿ: ವಿ ಸೋಮಣ್ಣ