ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿ: ಸಿ.ಪಿ.ಐ ಅಂಬರೇಶ

ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಿ: ಸಿ.ಪಿ.ಐ ಅಂಬರೇಶ

ಭಾಲ್ಕಿ: ಗೌರಿ ಗಣೇಶ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಸಿ.ಪಿ.ಐ ಅಂಬರೇಶ ಹೇಳಿದರು.

ಪಟ್ಟಣದ ಪುರಭವನದಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ಯ ಆಯೋಜಿಸಿದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣೇಶ ಉತ್ಸವ ಶಾಂತಿಯುತವಾಗಿ ಆಚರಿಸಬೇಕು, ಸಾರ್ವಜನಿಕರು ಯಾವುದೆ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡದೆ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಬೇಕೆಂದು ಹೇಳಿದರು.

ಅಗ್ನಿಶಾಮಕದ ಅಧಿಕಾರಿ ದತ್ತಾತ್ರಿ ಮಾತನಾಡಿ ಗೌರಿ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ ಪೆಂಡಲನಲ್ಲಿ ಪೆಟ್ರೋಲ್, ಡಿಸೇಲ, ಪಟ್ಟಾಕಿ, ಅಗ್ನಿ ಅವಘಡ ಸಂಭವಿಸುವAತಹ ಯಾಗುವುದೆ ಸಾಮಗ್ರಿಗಳನ್ನು ಬಳಸುವಂತಿಲ್ಲ, ಮುನ್ನೆಚರಿಕೆ ಕ್ರಮವಾಗಿ ೨ ಬಕೇಟ ಮರಳು ಹಾಗೂ ನೀರನ್ನು ಶೇಖರಿಸಿ ಇಡಬೇಕು. ಎರಡು ಬದಿಯಲ್ಲಿ ಮಹಾದ್ವಾರದ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು, ಅಗ್ನಿ ದುರಂತ ಆಗದಂತೆ ಸಂಬAಧಿಸಿದ ಕಿಟ್ಟ್ ಗಳನ್ನು ಬಳಸುವುದು ಕಡ್ಡಾಯ ಎಂದರು. ಇದನ್ನೂ ಓದಿ: ಬೆಳೆ ಸಮೀಕ್ಷೆ ರೈತರೇ ನೀವೇ ಮಾಡಲು ಅವಕಾಶ

ಜೆಸ್ಕಾಂನ ಸಹಾಯಕ ಅಭಿಯಂತರರಾದ ರಜಿನಿಕಾಂತ ಮಾತನಾಡಿ ಮಳೆಗಾಲ ಇರುವುದರಿಂದ ವಿದ್ಯುತ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ವಿದ್ಯುತ ಸಂಪರ್ಕ ಕುರಿತು ಜಾಗೃತೆ ವಹಿಸಿ ಯಾವುದೆ ಅವಘಡ ಸಂಭವಿಸದAತೆ ಎಚ್ಚರವಹಿಸಬೇಕೆಂದು ತಿಳಿಸಿದರು.

ಈ ವೇಳೆ ಪುರಸಭೆ ಸಭೆಯ ಮುಖ್ಯಾಧಿಕಾರಿ ಸಂಗಮೇಶ, ಕಾರಬಾರಿ ಪ್ರಕಾಶ ಮಾಶೆಟ್ಟೆ, ಅಶೋಕ ಗಾಯಕವಾಡ, ಸಂಗಮೇಶ ವಾಲೆ, ಸಾಗರ ಮಲಾನಿ,ವಿಜಯಕುಮಾರ ರಾಜಭವನ, ಶೇಖ ನಜೀರ, ನಗರ ಮುಖಂಡರು ಹಾಜರಿದ್ದರು.

 

 

Related