ಕೊಟ್ಟೂರು: ಐತಿಹಾಸಿಕ ಕುರಿಹಕ್ಕಿ ಲಿಂಗ ದೇವಾಲಯ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ಭಕ್ತರು ನಾನಾ ಭಾಗಗಳಿಂದ ಬಂದು ದರ್ಶನ ಪಡೆಯಲು ಗಜಾಪುರ ಗ್ರಾಮಕ್ಕೆ ನಿತ್ಯವು ಸಂಚರಿಸುತ್ತಾರೆ ಕೆಸರು ಗದ್ದೆಯಂತೆ ಕಂಡ ರಸ್ತೆಗಳನ್ನು ಕಂಡು ಬಾಯಿ ಮೂಗು ಮುಚ್ಚಿಕೊಂಡು ಸಾಗಬೇಕಾಗಿದೆ. ಸ್ವಚ್ಛತೆಯಂತು ಮರಿಚಿಕೆ ಯಾಗಿದೆ. ಅಧಿಕಾರಿಗಳು ಗಮನ ಹರಿಸದೆ ಇರುವುದು ಕೆಂಗಣ್ಣಿಗೆ ಗುರಿಯಾಗಿದೆ.
ಗ್ರಾಮದಲ್ಲಿ, ಎತ್ತ ನೋಡಿದರೂ ಕಸದರಾಶಿಗಳ ಪರಿಣಾಮದಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳದ್ದೇ ದರ್ಬಾರು ಎನ್ನುವಂತೆ ಇದೆ. ಈ ಭಾಗದಲ್ಲಿ ನಡೆದರೆ ಸಂಕ್ರಾಮಿಕ ರೋಗ ಹರಡುತ್ತದೆ ಎನ್ನುವ ಬೀತಿಯಲ್ಲಿದ್ದಾರೆ ಗ್ರಾಮದವರು. ಸಂಘಟನೆಯ ಹೋರಾಟಗಾರರು ಈ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಗ್ರಾ.ಪಂ ಅಧಿಕಾರಿಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದರು ಇತ್ತೀಚಿನ ದಿನಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡು ಕೆಲವೊಂದು ಕೆಲಸಗಳನ್ನು ಸ್ವಚ್ಛತೆ ನಡೆಸಿದರು.
ಸುಮಾರು ಎರಡು ವರ್ಷಗಳಾದರೂ ಕಾಲುವೆ ಚರಂಡಿಗಳು ಹೊಸದಾಗಿ ನಿರ್ಮಾಣಗೊಳ್ಳದೆ ವಂಚಿತರಾಗಿದ್ದಾರೆ. ಸರ್ಕಾರದಿಂದ ಅನುದಾನ ಬಂದಿದ್ದು ಅದನ್ನು ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಸದಂತೆ ನೆನೆಗುದಿಗೆ ಬಿದ್ದಿದೆ. ಅಕ್ಕಪಕ್ಕದ ಜಾಗದವರಿಂದ ಒತ್ತುವರಿ ಆಗಿರುವುದರಿಂದ ರಾಜಕೀಯ ವ್ಯಕ್ತಿಗಳಿಂದ ಪ್ರಭಾವ ಬೀರುತ್ತಿದ್ದು ಇದೇ ಕಾರಣದಿಂದ ಕಾಲುವೆಯ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗ್ರಾಮಸ್ಥರು ಹಾಗೂ ಸಂಘಟನೆಗಳು ಹೇಳಿದರು.
ಅಧಿಕಾರಿಗಳು ಆಡಳಿತಮಂಡಳಿಯವರು ಸರ್ಕಾರದಿಂದ ಬಂದಂತಹ ಅನುದಾನವನ್ನು ರೀತಿಯಾಗಿ ಉಪಯೋಗ ಮಾಡದಂತೆ ರಾಜಕೀಯ ಪ್ರಭಾವಿ ವ್ಯಕ್ತಿಗಳಿಂದ ತಾರತಮ್ಯ ನಡೆಯುತ್ತಿದೆ ಎಂದು ಗ್ರಾಮಸ್ಥರು ಹಾಗೂ ಸಂಘಟನೆಗಳು ಸಿಪಿಐ ರೇಣುಕಾ ಬಸವರಾಜ ಅಜ್ಜಪ್ಪ ಸುನಿಲ್ ದೂರುತ್ತಿದ್ದಾರೆ ಅಧಿಕಾರಿಗಳ ವರ್ಗದವರು ಇತ್ತ ಗಮನಹರಿಸಿ ದುರಸ್ಥಿಯಲ್ಲಿ ಇರುವ ಕಾಮಗಾರಿಯನ್ನು ಮಾಡಲು ಮುಂದಾಗಬೇಕು ಎಂದು ಗ್ರಾಮಸ್ಥರು ,ಸಂಘಟನೆ ಗಳು ಒತ್ತಾಯಿಸಿದ್ದಾರೆ.