ಕೇಂದ್ರ ಬಜೆಟ್ ಮಂಡನೆ; ಉದ್ಯೋಗಾಕಾಂಕ್ಷಿಗಳಿಗೆ ಬಂಪರ್​ ಕೊಡುಗೆ

ಕೇಂದ್ರ ಬಜೆಟ್ ಮಂಡನೆ; ಉದ್ಯೋಗಾಕಾಂಕ್ಷಿಗಳಿಗೆ ಬಂಪರ್​ ಕೊಡುಗೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಇದೀಗ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದು ಈ ಬಜೆಟ್ ಮಂಡಳಿಯಲ್ಲಿ ಹೊಸದಾಗಿ ಉದ್ಯೋಗಕ್ಕೆ ಸೇರುವ ಯುವಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಹೌದು, ಇಂದು ಬಜೆಟ್ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ದೇಶದ ಯುವಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ 1 ತಿಂಗಳ ಪಿಎಫ್​ ಅನ್ನು ಕೇಂದ್ರ ಸರ್ಕಾರವೇ ನೀಡಲಾಗುವುದು ಎಂದು ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಕೇಂದ್ರ ಬಜೆಟ್ ಮಂಡನೆ

ಮೊದಲ ಬಾರಿಗೆ ಸಂಘಟಿತ ವಲಯದಲ್ಲಿ ಉದ್ಯೋಗವನ್ನು ಪ್ರಾರಂಭಿಸುವವರಿಗೆ ಒಂದು ಪಿಎಫ್​ ಅನ್ನು ನೀಡಲಾಗುವುದು. ಈ ವೇತನವನ್ನು ಡಿಬಿಟಿ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು. ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯು ಸರ್ಕಾರದ ಒಂಬತ್ತು ಆದ್ಯತೆಗಳಲ್ಲಿ ಒಂದಾಗಿದೆ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಸಹಾಯವನ್ನು ಪಡೆಯಲಿದ್ದಾರೆ.

ಇಪಿಎಫ್‌ಒನಲ್ಲಿ ನೋಂದಾಯಿಸಿದ ಜನರಿಗೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಸರ್ಕಾರವು ಉದ್ಯೋಗಕ್ಕೆ ಸಂಬಂಧಿಸಿದ ಮೂರು ಯೋಜನೆಗಳನ್ನು ಪ್ರಾರಂಭಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಒಂದು ತಿಂಗಳ ಪಿಎಫ್ ಕೊಡುಗೆ ನೀಡುವುದರಿಂದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಕರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದರು.

 

Related