ಬಳ್ಳಾರಿ ಜೈಲಿನಲ್ಲಿ ದಾಸನಿಗೆ ಸಕಲ ಸೌಲಭ್ಯಕ್ಕೆ ಬ್ರೇಕ್

ಬಳ್ಳಾರಿ ಜೈಲಿನಲ್ಲಿ ದಾಸನಿಗೆ ಸಕಲ ಸೌಲಭ್ಯಕ್ಕೆ ಬ್ರೇಕ್

ಬಳ್ಳಾರಿ: ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸೌಲಭ್ಯ ಒದಗಿಸಲಾಗುತ್ತಿದ್ದೆ ಎಂಬ ಕಾರಣಕ್ಕೆ ಇದೀಗ ಅವರನ್ನು ಬಳ್ಳಾರಿಯ ಸೆಂಟ್ರಲ್ ಜೈಲ್ ಗೆ ಹಾಕಲಾಗಿದ್ದು ನಿನ್ನೆ (ಗುರುವಾರ ಆಗಸ್ಟ್ 2) 9ರಂದು ಬೆಂಗಳೂರಿನಿಂದ ಬಳ್ಳಾರಿ ಕಾರಾಗ್ರಹ ಜೈಲಿಗೆ ಹಾಕಲಾಗಿದೆ.

ಹೇಳಿಕೇಳಿ ಬಳ್ಳಾರಿ ಜೈಲಿಗೆ ಅದರದೇ ಆದ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಬ್ರಿಟಿಷರನ್ನು ಈ ಬಳ್ಳಾರಿ ಜೈಲಿನಲ್ಲಿಯೇ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು ಅಂತಹ ಜೈಲಿನಲ್ಲಿ ಇದೀಗ ನಟ ದರ್ಶನ್ ಅವರನ್ನು ಇರಿಸಲಾಗಿದೆ.

ಈಗಾಗಲೇ ಬಳ್ಳಾರಿ ಜೈಲಿನಲ್ಲಿ ಒಂದು ದಿನ ಕಳೆದ ದರ್ಶನ್ ಅವರ ದಿನ ಹೇಗಿತ್ತು ಎಂಬುದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ.

ಯೆಸ್..ನಟ ದರ್ಶನ್ ಅನ್ನು ನಿನ್ನೆ (ಆಗಸ್ಟ್ 29) ಕ್ಕೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ವಿಶೇಷ ಆತಿಥ್ಯ ದೊರೆಯುತ್ತಿದ್ದ ಕಾರಣ ಹಾಗೂ ಒಂದೇ ಪ್ರಕರಣದ ಆರೋಪಿಗಳಿಗೆ ಭೇಟಿ ಮಾಡಲು ಮಾಡಲು ಅವಕಾಶ ಸಿಕ್ಕಿದ್ದ ಕಾರಣ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ದಾಸನಿಗೆ ಸೆ.9ರ ವರೆಗೆ ಜೈಲೇ ಗತಿ!

ಹೇಗೋ ಬಿಂದಾಸ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದ ನಟ ದರ್ಶನ್ ಅವರಿಗೆ ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯಲು ಆಗುತ್ತಿಲ್ಲ. ಇನ್ನು ನಿನ್ನೆ ಜೈಲಿಗೆ ಬಂದ ಬಳಿಕ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವನ್ನು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ. ಕೇವಲ ನಿನ್ನೆ ರಾತ್ರಿ ಮಾತ್ರ ತುಸು ಊಟ ಮಾಡಿದ್ದರು. ಇಂದು (ಆಗಸ್ಟ್ 30) ರ ಬೆಳಿಗ್ಗೆ ಜೈಲಿನಲ್ಲಿ ತಿನ್ನಲು ಉಪ್ಪಿಟ್ಟು ನೀಡಿದ್ದು, ಉಪ್ಪಿಟ್ಟು ಸೇವಿಸಿದ್ದಾರೆ.

ಒಟ್ಟಿನಲ್ಲಿ ಅದೇನೇ ಆಗಲಿ ನಟ ದರ್ಶನ್ ಅವರಿಗೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗಿ ಬರುತ್ತಿರುವುದಂತೂ ಎಲ್ಲಾ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.

Related