ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು

ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು

ಮಡಿಕೇರಿ : ಕೊರೋನಾ ವೈರಸ್ ಪರಿಣಾಮದ ಕುರಿತು ಭವಿಷ್ಯ ನುಡಿದಿರುವ ಬ್ರಹ್ಮಾಂಡ ಗುರೂಜಿ ವಿರುದ್ಧ ಕೊಡಗಿನಲ್ಲಿ ದೂರು ದಾಖಲಾಗಿದೆ. ಕೊರೋನಾ ವೈರಸ್‍ನಿಂದ ಬಚಾವ್ ಆಗಲು ದೇವರನ್ನು ನಂಬುವುದೇ ಪರಿಹಾರ ಎಂದಿರುವ ಗುರೂಜಿ, ಕೊರೋನಾ ಜೊತೆಗೆ, ಭೂಕಂಪನದ ಬಗ್ಗೆಯೂ ಎಚ್ಚರಿಕೆ ನೀಡಿದ್ದರು. ಭಾರಿ ಭೂಕಂಪದಿಂದ ಕೊಡಗು ನೆಲಸಮವಾಗುತ್ತದೆ ಎಂದಿದ್ದರು.

ಈ ಒಂದು ಭವಿಷ್ಯದ ವಿರುದ್ಧ ಕೊಡಗು ಬೆಳೆಗಾರ ಒಕ್ಕೂಟವು ದೂರು ಸಲ್ಲಿಸಿದೆ. ಶ್ರೀಮಂಗಲ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊರೋನಾ ಪರಿಣಾಮಗಳ ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ನಾಗೇಂದ್ರ ಶರ್ಮಾ, ಎರಡು ವರ್ಷಗಳ ಹಿಂದಿನ ಅತಿವೃಷ್ಟಿಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದ್ದು, ತುಂಬಾ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ ಎಂದು ಹೇಳಿದ್ದರು.

ಗುರೂಜಿ ಭವಿಷ್ಯ ಕೊಡಗಿನ ಜನತೆಯಲ್ಲಿ ಭಯ ಭೀತಿ ಹುಟ್ಟಿಸಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಗುರೂಜಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ಸಲ್ಲಿಸಲಾಗಿದೆ.

Related