ನೀಲಿ ಚಿತ್ರ ತೊರಿಸಿದ ನಿತ್ಯನಂದ

ನೀಲಿ ಚಿತ್ರ ತೊರಿಸಿದ ನಿತ್ಯನಂದ

ಅಹಮದಾಬಾದ್,ಮಾ. 10 : ಅತ್ಯಾಚಾರ ಆರೋಪದಲ್ಲಿ ಸಿಲುಕಿರುವ ಸ್ವಘೋಷಿತ ದೇವಮಾನವ ನಿತ್ಯಾನಂದನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಿತ್ಯಾನಂದ ವಿರುದ್ಧ ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸಿರುವ ಆರೋಪ ಕೇಳಿಬಂದಿದ್ದು, ನಿತ್ಯಾನಂದನ ಆಶ್ರಮದಲ್ಲಿ ತನಿಖೆ ನಡೆಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಹಮದಾಬಾದ್ನಲ್ಲಿರುವ ತನ್ನ ಆಶ್ರಮದಲ್ಲಿ ಮಕ್ಕಳಿಗೆ ನೀಲಿಚಿತ್ರ ತೋರಿಸಿದ್ದಾರೆ ಎಂಬ ಆರೋಪ ನಿತ್ಯಾನಂದ ವಿರುದ್ಧ ಕೇಳಿಬಂದಿದೆ. ವಿಶೇಷ ನ್ಯಾಯಾಲಯದ ಆದೇಶದಂತೆ ಮಾ. 6ರಂದು 14 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಅಹಮದಾಬಾದ್ನ ಹೊರವಲಯದಲ್ಲಿರುವ ಹೀರಾಪುರ ಗ್ರಾಮದ ಆಶ್ರಮದಲ್ಲಿರುವ ಗುರುಕುಲದಲ್ಲಿರುವ ಮಕ್ಕಳಿಗೆ ನೀಲಿ ಚಿತ್ರ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

Related