ರಕ್ತದಾನ ಶಿಬಿರ

ರಕ್ತದಾನ ಶಿಬಿರ

ದೇವನಹಳ್ಳಿ: ವಿಜಯಪುರ ಪಟ್ಟಣದ ರೋಟರಿ ಶಾಲಾ ಆವರಣದಲ್ಲಿ ಸುದೀಪ್ ಹುಟ್ಟು ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ, ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ರಕ್ತನಿಧಿ ಚೇರ್ಮನ್ ರೊಟೇರಿಯನ್ ಮಮತಾ ಬಾಲಾಜಿ ಸಹಯೋಗದಲ್ಲಿ ವಿಜಯಪುರ ರೋಟರಿ ಅಧ್ಯಕ್ಷೆ ಅನಸೂಯಮ್ಮ ಸಂಪತ್ ಗುರುವಾರ ರಕ್ತದಾನ ಶಿಬಿರ ಏರ್ಪಡಿಸಿದರು.
ಈ ಕುರಿತು ಮಾತನಾಡಿದ ಅವರು ಆರೋಗ್ಯವಂತ ಪುರುಷರು, ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ಸ್ವೀಕರಿಸುವುದರಿಂದ ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ರಕ್ತದಾನ ಮಾಡುವುದರಿಂದ ಇತರರಿಗೆ ತುರ್ತು ಪರಿಸ್ಥಿತಿಯಲ್ಲಿ ಅನುಕೂಲವಾಗಿ ಜೀವ ಉಳಿಸುವಂತಾಗುತ್ತದೆ, ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ, ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ, ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತವಷ್ಟೇ ರೋಗಿಯ ಜೀವ ಉಳಿಸಲು ಸಾಧ್ಯ ಎಂದು ತಿಳಿಸಿದರು.

Related