ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್

ಗಡಿ ಜಿಲ್ಲೆಗೂ ಕಾಲಿಟ್ಟ ಬ್ಲಾಕ್ ಫಂಗಸ್

ಚಾಮರಾಜನಗರ. ಬೆಳಗಾವಿ : ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗೂ ಇದೀಗ ಬ್ಲ್ಯಾಕ್ ಫಂಗಸ್ ಕಾಲಿಟ್ಟಿದೆ.

ಗಡಿ ಜಿಲ್ಲೆಯಲ್ಲಿ ಇಬ್ಬರು, ಚಾಮರಾಜನಗರದಲ್ಲಿ ಇಬ್ಬರು ಕೊರೋನಾ ಸೋಂಕಿತರಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಗುಂಡ್ಲುಪೇಟೆ ತಾಲೋಕಿನ ಹಂಗಳದ ವ್ಯಕ್ತಿ ಹಾಗೂ ತಾಲೂಕಿನ ಕಾಳನಹುಂಡಿ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರನ್ನು ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರವಿ ಮಾಹಿತಿ ನೀಡಿದ್ದಾರೆ.

ಚಿಕ್ಕೋಡಿಯಲ್ಲೊಂದು ಕೇಸ್, ಬೆಳಗಾವಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಮೂಲದ ಧರ್ಮಣ್ಣ ನರಸಪ್ಪ ದಳವಾಯಿ ಎಂಬ ವ್ಯಕ್ತಿ ಅಥಣಿ ಕೊಕಟನೂರು ಗ್ರಾಮದಲ್ಲಿದ್ದು, ಆತನಿಗೆ ಬ್ಲಾಕ್ ಫಂಗಸ್ ಧೃಢಪಟ್ಟಿದೆ.

ಕೊರೋನಾ ಸೊಂಕಿಗೆ ತುತ್ತಾಗಿದ್ದ ಕೆಲ ದಿನಗಳ ಹಿಂದೆ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ, ಜಮಖಂಡಿವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕೆ ಕೊಕಟನೂರು ಗ್ರಾಮಕ್ಕೆ ಆಗಮಿಸಿದ್ದ. ಕೊಕಟನೂರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮುಖ ಹಾಗೂ ಕಣ್ಣಿನ ಬಾವು ಕಾಣಿಸಿಕೊಂಡಿತ್ತು. ವೈದ್ಯರ ತಪಾಸಣೆ ಬಳಿಕ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢಪಟ್ಟಿದೆ.

ಬ್ಲ್ಯಾಕ್ ಪಂಗಸ್ ಕಾಣಿಸಿಕೊಂಡ ಹಿನ್ನೆಲೆ ಅಥಣಿ ತಹಶೀಲ್ದಾರ್‌ಗೆ ವಿಷಯ ತಿಳಿಸಲಾಗಿದೆ.

Related