ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಐಟಿ-ಬಿಟಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಸ್ಥರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ಒಂದನ್ನು ನೀಡಿದೆ. ಇನ್ಮುಂದೆ ಐಟಿ-ಬಿಟಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆಯಾಗಲಿದೆ.
ಹೌದು, ಈ ಹಿಂದೆ ಐಟಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಗಳು 9 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಿತ್ತು, ಆದರೆ ಈಗ ದಿಡೀರಂತ ರಾಜ್ಯ ಸರ್ಕಾರ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳು ಪ್ರತಿನಿತ್ಯ ಇನ್ನು ಮುಂದೆ 14 ಗಂಟೆ ಕಾರ್ಯನಿರ್ವಹಿಸಬೇಕೆಂದು ಹೇಳುತ್ತಿದೆ.
ಆದರೆ ದಿಡೀರಂತ ಒಂಬತ್ತು ಗಂಟೆಯಿಂದ 14 ಗಂಟೆ ಕೆಲಸದ ಸಮಯವನ್ನುಜಾಸ್ತಿ ಮಾಡಿದ್ದರೆ, ಇನ್ನು 14 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಕಷ್ಟ ಸಾಧ್ಯ ಎಂದು ಐಟಿ ಉದ್ಯೋಗಿಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೆಲಸದ ಅವಧಿ 9 ಗಂಟೆ ಬದಲಿಗೆ 14 ಗಂಟೆಗಳ ಕಾಲ ಉದ್ಯೋಗಿಗಳು ಕೆಲಸ ಮಾಡುವ ಕಾನೂನು ತರಲು ಸರ್ಕಾರದ ಮೇಲೆ ಐಟಿ-ಬಿಟಿ ಕಂಪನಿಗಳು ಒತ್ತಡ ಹಾಕಿವೆ. ಈ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯಾ ಎಂಬ ಪ್ರಶ್ನೆ ಮೂಡಿದೆ. ಸಂಬಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಆದರೆ ಕೆಲಸದ ಅವಧಿಯನ್ನು ಮಾತ್ರ ಹೆಚ್ಚು ಮಾಡುತ್ತಾರೆ. ಇದನ್ನೂ ಓದಿ: ನೂತನ ಅಧ್ಯಕ್ಷರಾಗಿ ಸಿದ್ದಣ್ಣ ಚಂದ್ರಶೇಖ ಆರಬೋಳ ಆಯ್ಕೆ
ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ ಮಾಡುವುದಕ್ಕೆ ಕಾರ್ಮಿಕ ಇಲಾಖೆ ಬಹುತೇಕವಾಗಿ ಒಪ್ಪಿಗೆ ನೀಡಿದಂತೆ ಆಗಿದೆ. ಈ ವರೆಗೆ ಕೇವಲ 9 ಗಂಟೆ ಮಾತ್ರ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಇನ್ಮುಂದೆ 14 ಗಂಟೆ ಕೆಲಸ ಮಾಡಬೇಕಂತೆ. ಐಟಿ-ಬಿಟಿ ಕಂಪನಿಗಳ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನು ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೆ 20 ಲಕ್ಷ ಐಟಿ ಉದ್ಯೋಗಿಗಳು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.