ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಗ್‌ ಫೈಟ್!

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಗ್‌ ಫೈಟ್!

ಕೋಲಾರ: ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕೆ ಹೆಚ್ ಎಂ ಮತ್ತು ರಮೇಶ್ ಕುಮಾರ್ ಬಣಗಳ ಮಧ್ಯ ಕೂಗಾಟ ತಲ್ಲಾಟ ನಡೆದ ಕಾರಣ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಸಭೆಯಲ್ಲಿ ನೆರೆದಿದ್ದ ಕೆಲ ನಾಯಕರನ್ನು ಸಭೆಯಿಂದ ಹೊರ ತಳ್ಳಲಾಯಿತು.

ನಗರದ ನಂದಿನಿ ಪ್ಯಾಲೇಸ್ ನಲ್ಲಿ ರಾಜ್ಯ ಮುಖಂಡರ ನಡುವೆ ಸಭೆಯಲ್ಲಿ ಎರಡು ಬಣಗಳಿಂದ ಮಾತಿನ ಚಾಕಮಕಿ ನಡೆದು ರಮೇಶ್ ಕುಮಾರ ಹಾಗೂ ಕೆಲವರನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಕೆಲ ಕಾಲ ಗದ್ದಲ ಉಂಟಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ರನ್ನು ಸಭೆಯಿಂದ ಹೊರ ತಳ್ಳಿದ ಪ್ರಸಂಗ ನಡೆಯಿತು. ಇದನ್ನೂ ಓದಿ: ಕನಕಪುರದಲ್ಲಿ ಜನಸ್ಪಂದನ ಕಾರ್ಯಕ್ರಮ

ಹೌದು, ಶಾಸಕರ ಮುಂದೆಯೇ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಕೆ.ಹೆಚ್. ಮುನಿಯಪ್ಪ ಹಾಗೂ ಕೆಲವು ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಂಗ್ರೆಸ್ ಪಕ್ಷದ ವಿರುದ್ದ ಕೆಲಸ ಮಾಡಿದವರನ್ನು ವೇದಿಕೆ ಮೇಲೆ ಕೂರಿಸಿದ್ದೀರಿ ಎಂದು ಗಲಾಟೆ ಶುರುವಾಗಿದ್ದು, ಇದೇ ವೇಳೆ ಕೆಲ ಕಾರ್ಯಕರ್ತರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್ ಮೇಲೆ ಕೈ ಮಾಡಿ ಸಭೆಯಿಂದ ಹೊರ ತಳ್ಳಿದ್ದಾರೆ.

ಇನ್ನು ಈ ಸಭೆಯಲ್ಲಿ ಶಾಸಕರಾದ ಕೊತ್ತೂರು ಮಂಜುನಾಥ್, ನಂಜೇಗೌಡ, ಕೋಲಾರ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್  ಭಾಗಿಯಾಗಿದ್ದರು.

 

Related