ಎಚ್ಚರ ರೈತ ಎಚ್ಚರ…ನಿಮ್ಮ ಆಸ್ತಿ ನಿಮ್ಮದೇ ಹೆಸರಿನಲ್ಲಿದಿಯಾ? ತಿಳಿದುಕೊಳ್ಳಿ

ಎಚ್ಚರ ರೈತ ಎಚ್ಚರ…ನಿಮ್ಮ ಆಸ್ತಿ ನಿಮ್ಮದೇ ಹೆಸರಿನಲ್ಲಿದಿಯಾ? ತಿಳಿದುಕೊಳ್ಳಿ

ಗುಂಡ್ಲುಪೇಟೆ: ರಾಜ್ಯದ ರೈತರ ಜಮೀನು ಗಳನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿ ಕಬಳಿಸುವ ಹುನ್ನಾರ ಸರ್ಕಾರದ ಮೂಲಕ ನಡೆಯುತ್ತಿದ್ದು ರಾಜ್ಯದ ಹಾಗೂ ತಾಲ್ಲೂಕಿನ ರೈತರು ಇಂದಿನಿಂದಲೇ ಇದರ ವಿರುದ್ದ ಹೋರಾಟ ಮನೋಭಾವ ‌ಬೆಳೆಸಿಕೊಳ್ಳಬೇಕು ಇಲ್ಲವಾದಲ್ಲಿ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಹಂಗಳ ಪ್ರಣಯ್ ಈ ಮೂಲಕ ಎಚ್ಚರಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪ್ರಣಯ್, ಈಗಾಗಲೇ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿರುವ ವಕ್ಪ್ ಆಸ್ತಿ ವಿವಾದ ದಿನೇ ದಿನೇ ಅನೇಕ ಜಿಲ್ಲೆಗಳಿಗೆ ವ್ಯಾಪಿಸುತ್ತಾ ಬರುತ್ತಿದೆ.

ಈಗಾಗಲೇ ವಿಜಯಪುರ, ಯಾದಗಿರಿ,ಧಾರವಾಡ ಜಿಲ್ಲೆಗಳಲ್ಲಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ ಇದು ರಾಜ್ಯಾದ್ಯಂತ ರೈತರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಲ್ಯಾಂಡ್ ಜಿಯಾದ್ ಗೆ ಬೆಂಬಲ ಕೊಡುತ್ತಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಈಗ ಏಕಾಏಕಿ ತಮ್ಮದೇ ಭೂಮಿಯನ್ನು ಬೇರೆಯವರು ಕಬಳಿಸುತ್ತಾರೆ ಎಂದರೆ ರೈತನ ಕಥೆ ಏನಾಗಬೇಕು?. ಕೇವಲ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ರಾಜ್ಯದ ಜನತೆಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಜನರಿಗೆ ಚೊಂಬು ಕೊಟ್ಟು ಆಡಳಿತ ನಡೆಸುತ್ತಿದೆ. ಇದನ್ನೂ ಓದಿ: 50 ಬೆಡ್ ತೀವ್ರ ನಿಗಾ ಘಟಕಕ್ಕೆ ಶಿಲಾನ್ಯಾಸ

ನಮ್ಮ ಗುಂಡ್ಲುಪೇಟೆ ತಾಲ್ಲೂಕಿನಲ್ಲೂ ಕೂಡ ದಯಮಾಡಿ ರೈತರು ಒಮ್ಮೆ ತಮ್ಮ ತಮ್ಮ ಪಹಣಿಯನ್ನು ಪರಿಶೀಲಿಸಿ, ನಮ್ಮ ನಮ್ಮ ಜಮೀನು ನಮ್ಮದೇ ಹೆಸರಿನಲ್ಲಿ ಇದೀಯಾ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ, ಇಲ್ಲದಿದ್ದರೆ ನಮ್ಮದೇ ಭೂಮಿಯನ್ನ ಈ ಸರ್ಕಾರ ಯಾರಿಗಾದರೂ ಮಾರಿಬೀಡಬಹುದು ಎಂದರು.

ವಿಶೇಷವಾಗಿ ಅನ್ಯ ಧರ್ಮೀಯರು ವಾಸಿಸುವ ಗ್ರಾಮದ ರೈತರುಗಳು ಇತ್ತೀಚಿನ ಆರ್ಟಿಸಿಯನ್ನು (RTC) ಪಡೆದು ನಮ್ಮ ನಮ್ಮ ಜಮೀನುಗಳು ನಮ್ಮದೇ ಹೆಸರಿನಲ್ಲಿ ಇದೀಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಕ್ಪ್ ಆಸ್ತಿ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ವರ್ತನೆಯನ್ನು ನೋಡಿದರೆ ಟಿಪ್ಪು ಸುಲ್ತಾನ್ ಮಾದರಿಯನ್ನು ಅನುಸರಿಸುತ್ತಿದ್ದಾರೆ ಎಂಬ ಅನುಮಾನ ನಮಗೆ ಮೂಡಿದೆ.

ಕೂಡಲೇ ಇದರ ಬಗ್ಗೆ ರೈತರು ಜಾಗೃತವಾಗಬೇಕಾಗಿದೆ, ನಮಗೆ ಅರಿವಿಲ್ಲದ ರೀತಿಯಲ್ಲಿ ಬಡ ರೈತರ ಜಮೀನುಗಳನ್ನ ಬೇರೆಯವರ ಹೆಸರುಗಳಿಗೆ ಅಥವಾ ಸಂಸ್ಥೆಗಳ ಹೆಸರುಗಳಿಗೆ ವರ್ಗಾಯಿಸಿದರು ಆಶ್ಚರ್ಯ ಪಡಬೇಕಾಗಿಲ್ಲ ಎಂದರು.

 

 

 

Related