ಹಂದಿಕೇರಾ ಪ್ರೌಢಶಾಲೆಗೆ ಬಿಇಒ ಭೇಟಿ

ಹಂದಿಕೇರಾ ಪ್ರೌಢಶಾಲೆಗೆ ಬಿಇಒ ಭೇಟಿ

ಕಮಲನಗರ :ತಾಲ್ಲೂಕಿನ ಹಂದಿಕೇರಾ ಗ್ರಾಮದ ಪ್ರೌಢಶಾಲೆಗೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನಗೂರ ಶುಕ್ರವಾರ ಭೇಟಿ ನೀಡಿದರು.
ಈ ವೇಳೆ ಮಾತನಾಡಿ, ಇತ್ತೀಚಿಗೆ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಲವಾಲುಗಳನ್ನು ಸ್ವೀಕರಿಸಿದರು. ಶಿಕ್ಷಕರ ಕೊರತೆ ಬಗ್ಗೆ ತಹಸೀಲ್ದಾರ್ ರಮೇಶ ಪೆದ್ದೆ ಅವರಿಗೆ ಮನವಿ ಸಲ್ಲಿಸತ್ತಿದ್ದು, ಮನವಿಗೆ ಸ್ವಂದಿಸಿ ಶುಕ್ರವಾರ ನೇರವಾಗಿ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕ ನವನಾಥ ಗಾಯಕವಾಡ ಅವರೊಂದಿಗೆ ಸಮಾಲೋಚನೆ ನಡೆಸಿ ಅಥಿತಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸರ್ಕಾರಿ ಪ್ರೌಢಶಾಲೆಗೆ ನಿವೇಶನ ನೀಡಲು ಜನರಲ್ಲಿ ಮನವಿ ಮಾಡಿದರು. ಎರಡು ಕೋಣೆಗಳು ಕಟ್ಟಲು ಸರ್ಕಾರದಿಂದ ಮಂಜೂರು ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಕೋಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶಿಕ್ಷಕರ ಕೊರತೆ ಇದರೂ ಸಹ ಪ್ರಸ್ತುತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ ಬಂದಿದೆ. ಶಿಕ್ಷಕರು ಶಾಲೆಯಲ್ಲಿ ಶಿಕ್ಷಣದ ಪರಿಸರ ನಿರ್ಮಾಣ ಕೈಗೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಫಲಿತಾಂಶ ಬರಬೇಕು. ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೋದಿಸಬೇಕು. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ತರಕಾರಿ ಉಪಯೋಗಿಸಿ ಗುಣಮಟ್ಟದ ಊಟ ವಿತರಿಸಿಬೇಕು. ಶಿಥಿಲಗೊಂಡ ಶೌಚಾಲಯ ಕೋಣೆ ಗ್ರಾ.ಪಂ ವತಿಯಿಂದ ಕಟ್ಟಡ ಕಾಮಗಾರಿ ಆರಂಭಿಸಿದ್ದು, ಕಳಪೆ ಮಟ್ಟದಿಂದ ಕೂಡಿದೆ. ಮುಖ್ಯಗುರು ಮತ್ತು ಶಿಕ್ಷಕರು ಸೇರಿ ಕಾಮಗಾರಿ ನಡೆಯುವ ಸಮಯದಲ್ಲಿ ಗಮನಹರಿಸಿ ಗುಣಮಟ್ಟದ ಕಾಮಗಾರಿ ಮಾಡಲು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ, ಇಸಿಒ ಈಶ್ವರ ಕ್ಯಾದೆ, ಬಿಆರ್‌ಸಿ ಅಧಿಕಾರಿ ನಾರಾಯಣ ರಾಠೋಡ್, ಹಂದಿಕೇರಾ ಪ್ರೌಡಶಾಲೆ ಮುಖ್ಯ ಗುರು ನವನಾಥ ಗಾಯಕವಾಡ, ಸೋಂತೋಷ ದುಬೆ, ಗೋಪಾಳರಾವ ದೇವಕತ್ತೆ, ಸುಭಾಂಗಿ ಬನಸೋಡೆ, ಉಜ್ವಲಾ ತುರೆ, ಕಾಶಿನಾಥ ಹಡಪದ, ರಾಜಿಕುಮಾರ ಪಾಟೀಲ್. ದಾದಾರಾವ ಬಿರಾದಾರ, ರಾಜಕುಮಾರ ವಡಗಾವೆ, ಜನಾರ್ಧನ ರೆಡ್ಡಿ ಇನ್ನಿತರರಿದ್ದರು.

Related