ಬಿ.ಇ.ಓ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ

ಬಿ.ಇ.ಓ ಹಾಗೂ ಸಿಬ್ಬಂದಿ ಅಮಾನತ್ತಿಗೆ ಆಗ್ರಹ

ಸಂಡೂರು : ಡಾ. ಬಿ.ಆರ್ ಅಂಬೇಡ್ಕರ್ ರವರ ಪರಿ ನಿರ್ವಹಣೆ ದಿನಾಚರಣೆ ಆಚರಿಸದೇ ನಿರ್ಲಕ್ಷ್ಯ ಧೋರಣೆ ತೋರಿರುವ  ಹಾಗೂ  ತಮ್ಮ ಅವಿವೇಕತನದ  ಹೇಳಿಕೆಯೊಂದಿಗೆ  ಸಮರ್ಥಿಸಿಕೊಂಡಿರುವ, ಈ ಮೂಲಕ ಶಿಕ್ಷಣ ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಬಿ.ಇ.ಓ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಕ.ರಾ.ದ.ಸಂ ಸಮಿತಿ ಆಗ್ರಹಿಸಿದೆ.

 

ಸಂಬಂಧಿಸಿದಂತೆ ಪದಾಧಿಕಾರಿಗಳು ತಹಶೀಲ್ದಾರರಿಗೆ ಪತ್ರವನ್ನು ನೀಡಿದ್ದಾರೆ. ಬಿ.ಇ.ಓ ಕಚೇರಿಯಲ್ಲಿ ಪರಿ ನಿರ್ವಹಣಾ ದಿನಾಚರಣೆ ಮಾಡದಿರುವ ಕುರಿತು, ವಿಚಾರಿಸಲಾಗಿ ಬಿಇಓ ಯುವರಾಜ ನಾಯ್ಕ, ಸಿಬ್ಬಂದಿ ರೇವಣಸಿದಪ್ಪ, ಗೋಪಾಲ ತಮಗೆ ದಿನಾಚರಣೆ ಕುರಿತು ತಿಳಿದಿಲ್ಲ ಎಂಬ ಉದ್ಧಟನತನದ ಮಾತನ್ನಾಡಿದ್ದು, ತಮ್ಮ ತಪ್ಪನ್ನ ಸಮರ್ಥಿಸಿಕೊಳ್ಳೋ ಮೂಲಕ ಉದ್ಧಟನ ದಿಂದ ವರ್ತಿಸಿದ್ದಾರೆಂದು ಕದಸಂ. ಸಮಿತಿ ಆರೋಪಿಸಿದೆ.

ಕಾರಣ ಬಿಇಒ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ, ಕ್ರಮಕ್ಕಾಗಿ ತಹಶೀಲ್ದಾರರಿಗೆ ಕದಸಂ ಸಮಿತಿ ಅಧ್ಯಕ್ಷರು, ಹಾಗೂ ವಕೀಲ ಡಿ.ಹೆಚ್ ದುರುಗೇಶ ನೇತೃತ್ವದಲ್ಲಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Related