ಗುತ್ತಿಗೆದಾರಿಗೆ ಬಿಬಿಎಂಪಿ ಡೆಡ್ ಲೈನ್!

ಗುತ್ತಿಗೆದಾರಿಗೆ ಬಿಬಿಎಂಪಿ ಡೆಡ್ ಲೈನ್!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿಯನ್ನು ಘೋಷಿಸಿದ್ದು, ಈಗ ರಾಜ್ಯದಲ್ಲಿರುವಂತಹ ಗುತ್ತಿಗೆದಾರರಿಗೆ ಆತಂಕ ಶುರುವಾಗಿದೆ.

ಹೌದು, ಸರ್ಕಾರದ ಗ್ಯಾರಂಟಿಯಿಂದ ಗುತ್ತಿಗರದಾರಿಗೆ ಆತಂಕ ಶುರುವಾಗಿದ್ದು, ಜೂನ್ 5ರೊಳಗೆ ಬಾಕಿ ಇರುವ ಸುಮಾರು 2500 ಕೋಟಿ ರೂ. ಬಿಲ್ ಬಾಕಿ ಕ್ಲಿಯರ್ ಮಾಡುವಂತೆ ಬಿಬಿಎಂಪಿಗೆ ಬೆಂಗಳೂರು ಗುತ್ತಿಗೆದಾರರ ಸಂಘ ಡೆಡ್ ಲೈನ್ ನೀಡಿದೆ.

ಒಂದು ವೇಳೆ ಬಿಲ್ ಕ್ಲಿಯರ್ ಮಾಡದಿದ್ದಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಎಚ‌ರಿಕೆ ನೀಡಿದೆ. 5 ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾದ್ರೆ ಕಾಮಗಾರಿಯ ಬಾಕಿ ಕ್ಲಿಯರ್ ಆಗುತ್ತೋ ಇಲ್ವೊ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ಪಾಲಿಕೆಗೆ ಜೂನ್ 5 ರೊಳಗೆ ಹಣ ಕ್ಲೀಯರ್ ಮಾಡದೇ ಇದ್ದರೆ ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿ ಸ್ಥಗಿತ ಮಾಡುವುದಾಗಿ ಬೆಂಗಳೂರು ಗುತ್ತಿಗೆದಾರರ ಸಂಘ ಎಚ್ಚರಿಸಿದೆ. ಈ ಬಗ್ಗೆ ಬೆಂಗಳೂರು ಗುತ್ತಿಗೆದಾರರ ಸಂಘವು ಬಿಬಿಎಂಪಿ ಆಯುಕ್ತರನ್ನ ಭೇಟಿ ಮಾಡಿ ಬಾಕಿ ಬಿಲ್ ಕ್ಲೀಯರ್​ ಮಾಡುವಂತೆ ಮನವಿ ಮಾಡಿದೆ. ಇದೀಗ ಗುತ್ತೆಗೆದಾರರ ಡೆಡ್ ಲೈನ್ ನಿಂದ ಪಾಲಿಕೆಗೆ ಹೊಸ ಟೆನ್ಷನ್ ಶುರುವಾದಂತಾಗಿದೆ.

 

Related