ಶಹಾಪುರ: ದೂರದೃಷ್ಠಿ, ಮತ್ತು ಜನಪರ ಕಾಳಜಿಯಿಂದ ಎಲ್ಲ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಜನಸೇವೆ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದಡಿ ಇಡೀ ಕಲ್ಯಾಣ ಕರ್ನಾಟಕ ಭಾಗಕ್ಕೆ ದಿ. ಬಾಪುಗೌಡ ದರ್ಶನಾಪುರ ಅವರು ಪ್ರೇರಕ ಶಕ್ತಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯತಿಪ್ಪಣ್ಣಪ್ಪ ಕಮಕನೂರು ತಿಳಿಸಿದರು.
ದಿ.ಬಾಪುಗೌಡ ದರ್ಶನಾಪುರ ಅವರ ೩೬ನೇ ಪುಣ್ಯಸ್ಮರಣೆ ಕಾರ್ಯಕ್ರಮ ಶ್ರೀ ಚರಬಸವೇಶ್ವರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ಪಾಲ್ಗೊಂಡು ಮಾತನಾಡಿ ದಿ. ಬಾಪುಗೌಡರುದೀನ ದುರ್ಬಲರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ ನಾಯಕರಾಗಿದ್ದರು. ಪುಣ್ಯ ಪುರುಷರು, ಆದರ್ಶ ರಾಜಕಾರಣಿಯಾಗಿ, ಶಿಕ್ಷಣ ತಜ್ಞರಾಗಿ, ಸರ್ವರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ ಎಂದರು.
ಹಿರಿಯ ಧುರೀಣ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ ಬಾಪುಗೌಡರು ಸಗರನಾಡಿನ ರೈತಾಪಿ ವರ್ಗದ ಭೂಮಿಗಳಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಅವರು ಪಟ್ಟ ಶ್ರಮಕ್ಕೆ, ಇಂದು ಈ ಭಾಗದ ಭೂಮಿಗಳು ಹಸಿರಿನಿಂದ ಕಂಗೊಳಿಸುವುದಕ್ಕೆ ಸಾಕ್ಷಿಯಾಗಿದೆ, ಅದೇ ದಾರಿಯಲ್ಲಿ ನಡೆಯುತ್ತಿರುವ ಅವರ ಪುತ್ರ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಈ ಭಾಗದ ರೈತರು ಬೆಳೆದ ಬೆಳೆಗಳಿಗೆ ನೀರು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನೀರು ಕೊಟ್ಟ ಪುಣ್ಯತ್ಮಾರನ್ನು ನಾವು ಎಂದೂ ಮರೆಯಬಾರದು. ಹಿರಿಯರ ಮಾರ್ಗದಲ್ಲಿ ಮುನ್ನಡೆದು ರೈತರ, ಹಿಂದುಳಿದವರು ಸರ್ವರ ಆಶೋತ್ತರಗಳಿಗೆ ಸ್ಪಂಧಿಸುತ್ತಾ ೨೨೪ ಶಾಸಕರಿಗೆ ಮಾದರಿಯಾಗಿದ್ದು ರಾಜ್ಯಮಟ್ಟದ ಉತ್ತಮ ನಾಯಕರಾಗಿದ್ದಾರೆ ಎಂದರು.
ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. ಅದಕ್ಕಿಂತ ಪೂರ್ವದಲ್ಲಿ ಭೀಗುಡಿ ವೃತ್ತದಲ್ಲಿರುವ ದಿ.ಬಾಪುಗೌಡ ಪುತ್ಥಳಿಗೆ ದರ್ಶನಾಪುರ ಅಭಿಮಾನಿಗಳು, ಹಿತೈಶಿಗಳು ಕಾರ್ಯಕರ್ತರು ಗೌರವ ಸಮರ್ಪಣೆ ಸಲ್ಲಿಸಿದರು.
ರಾಜಕೀಯವಾಗಿ ದರ್ಶನಪುರ ಮನೆತನಕ್ಕೆ ಎದುರಾಳಿಗಳೇ ಇಲ್ಲಾ
ಸುಮಾರು ದಶಕಗಳಿಂದ ರಾಜಕೀಯವಾಗಿ ದರ್ಶನಾಪುರ ಮನೆತನದವರು ಮತಕ್ಷೇತ್ರದ ಜನರ ಸೇವೆ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶರಣಬಸಪ್ಪಗೌಡ ದರ್ಶನಾಪುರ ಹಗಳಿರುಳು ಜನರ ಸೇವೆಯಲ್ಲಿ ತೊಡಗಿಕೊಂಡಿದ್ದು. ಜನತೆ ದರ್ಶನಾಪುರ ಮನೆತನವನ್ನೆ ಮೆಚ್ಚಿಕೊಂಡಿದ್ದು. ರಾಜಕೀಯವಾಗಿ ದರ್ಶನಾಪುರ ಮನೆತನಕ್ಕೆ ಎದುರಾಳಿಗಳೇ ಇಲ್ಲಾ ಎಂದು ಕೇದಾರಲಿಂಗಯ್ಯ ಹಿರಿಯ ಧುರೀಣರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಯಾದಗಿರಿ ಶಾಸಕ ಚನ್ನರೆಡ್ಡಿ ಪಾಟೀಲ್ ತುನ್ನೂರ, ಚಂದ್ರಶೇಖರ ಆರಭೋಳ, ಶರಣಪ್ಪ ಸಲಾದಪೂರ, ಶಂಕ್ರಣ್ಣ ವಣಿಕ್ಯಾಳ, ಸಿದ್ದಲಿಂಗಣ್ಣ ಆನೇಗುಂದಿ, ಮಲ್ಲಣಗೌಡ ಉಕ್ಕಿನಾಳ, ಬಸವರಾಜ ಹಿರೇಮಠ, ಸಂತೋಷ ದೇವದುರ್ಗ, ಬಸಮ್ಮ ಉರಕಾಯಿ, ಬಸನಗೌಡ ಸುಬೇದಾರ, ಮಲ್ಲಿಕಾರ್ಜುನ ಪೂಜಾರಿ, ಸಿದ್ದನಗೌಡ ಕೆಂಭಾವಿ, ಇಬ್ರಾಹಿಂ ಶಿರವಾಳ, ಬಸವರಾಜ ಹೇರುಂಡಿ, ಲಿಯಾಖತ್ ಹುಸೇನ, ತಿಪ್ಪಣಪೂಜಾರಿ ಬಳಬಟ್ಟಿ, ಸಣ್ಣ ನಿಂಗಣ್ಣ ನಾಯ್ಕೊಡಿ, ಗುಂಡಪ್ಪ ತುಂಬಗಿ, ಗುರು ದೊಡ್ಮನಿ, ಶಾಂತಗೌಡ ನಾಗನಟಿಗಿ, ಹಣಮಂತ್ರಾಯ ದೊರಿ, ತಲಕಚಾಂದ, ಶಿವರಾಜ ಹೂಗಾರ, ಅಲ್ಲಾ ಪಟೇಲ್ ಮಕ್ತಾಪುರ ಸೇರಿದಂತೆ ಅನೇಕರು ಇದ್ದರು.
ಶರಣಯ್ಯ ಸ್ವಾಮಿ ಹಿರೇಮಠ ಸ್ವಾಗತಿಸಿದರು, ಶಿಕ್ಷಕ ಅರುಣಕುಮಾರ ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲ ಶಿವಲಿಂಗಣ್ಣಗೌಡ ಸಾಹು ವಂದಿಸಿದರು, ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ದಿ.ಬಾಪುಗೌಡರ ಅಭಿಮಾನಿಗಳು, ಕಾರ್ಯಕರ್ತರು ಹಿರಿಯ ಕಿರಿಯ ಮುಖಂಡರು, ಶ್ರೀ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಅಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.