ಕ್ಯಾಮರಾ ನೋಡಲು ಮಲಗಿದ್ದ ಕಂದನನ್ನು ಹೊಡೆದೆಬ್ಬಿಸಿದ ಬಾಲಯ್ಯ..!!

ಕ್ಯಾಮರಾ ನೋಡಲು ಮಲಗಿದ್ದ ಕಂದನನ್ನು ಹೊಡೆದೆಬ್ಬಿಸಿದ ಬಾಲಯ್ಯ..!!

ಇತ್ತೀಚೆಗೆ ಹಿಂದೂಪುರಕ್ಕೆ ಬಂದಿದ್ದ ಬಾಲಯ್ಯನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಯೊಬ್ಬ ಪುಟ್ಟ ಮಗುವನ್ನು ಕರೆದುಕೊಂಡು ಬಂದಿದ್ದ. ಬಾಲಯ್ಯ ಜೊತೆ ಸೆಲ್ಫಿಗಾಗಿ ಓಡಿ ಬಂದು ಬಾಲಯ್ಯ ಪಕ್ಕದಲ್ಲಿ ನಿಂತ. ಭಜದ ಮೇಲೆ ಮಗುವನ್ನು ಮಲಗಿಸಿಕೊಂಡಿದ್ದ.ನಿದ್ರಿಸುತ್ತಿದ್ದ ಪುಟ್ಟ ಕಂದನನ್ನು ಬಾಲಯ್ಯ ಜೋರಾಗಿ ಹೊಡೆದು ಎಬ್ಬಿಸಿ ಕ್ಯಾಮರಾ ನೋಡುವಂತೆ ಹೇಳಿದ್ದಾರೆ. ಬಾಲಯ್ಯನ ಹೊಡೆತಕ್ಕೆ ಬೆಚ್ಚಿದ ಮಗು ನಿದ್ರೆಯಿಂದ ಎದ್ದು ಗಾಬರಿಯಿಂದ ನೋಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಭಿಮಾನಿಗಳ ಜೊತೆ ಖಾರವಾಗಿ ನಡೆದುಕೊಳ್ಳುವ ಬಾಲಯ್ಯನ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ತನ್ನ ಚಿತ್ರ ವಿಚಿತ್ರ ರ‍್ತನೆ ಮೂಲಕವೇ ಗಮನ ಸೆಳೆದಿರುವ ಬಾಲಯ್ಯ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಎಲ್ಲಾ ಕಡೆ ಒಂದೇ ರೀತಿ. ಈಗಾಗಲೇ ಅನೇಕ ಬಾರಿ ಅಭಿಮಾನಿಗಳಿಗೆ ಹೊಡೆದಿದ್ದಾರೆ, ಕಪಾಳಮೋಕ್ಷ ಮಾಡಿದ್ದಾರೆ. ವಿಚಿತ್ರವಾಗಿ ನಡೆದುಕೊಂಡಿದ್ದಾರೆ.

ಬಾಲಯ್ಯ ಸರ‍್ವಜನಿಕ ಸ್ಥಳದಲ್ಲಿ ಹೊಡೆದಿದ್ದು ಒಬ್ಬರಿಗಾ ಇಬ್ಬರಿಗಾ. ಸಾಕಷ್ಟು ಅಭಿಮಾನಿಗಳು ಬಾಲಯ್ಯನಿಂದ ಹೊಡೆತ ತಿಂದಿದ್ದಾರೆ. ಇದೀಗ ಮತ್ತೊಂದು ಬಾಲಯ್ಯನ ವೀಡಿಯೋ ವೈರಲ್ ಆಗಿದೆ. ಇತ್ತೀಚೆಗೆ ಹಿಂದೂಪುರಕ್ಕೆ ಬಂದಿದ್ದ ಬಾಲಯ್ಯನನ್ನ ನೋಡಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಯೊಬ್ಬ ಪುಟ್ಟ ಮಗುವನ್ನು ಕರೆದುಕೊಂಡು ಬಂದಿದ್ದ. ಬಾಲಯ್ಯ ಜೊತೆ ಸೆಲ್ಫಿಗಾಗಿ ಓಡಿ ಬಂದು ಬಾಲಯ್ಯ ಪಕ್ಕದಲ್ಲಿ ನಿಂತ. ಭಜದ ಮೇಲೆ ಮಗುವನ್ನು ಮಲಗಿಸಿಕೊಂಡಿದ್ದ.ನಿದ್ರಿಸುತ್ತಿದ್ದ ಪುಟ್ಟ ಕಂದನನ್ನು ಬಾಲಯ್ಯ ಜೋರಾಗಿ ಹೊಡೆದು ಎಬ್ಬಿಸಿ ಕ್ಯಾಮರಾ ನೋಡುವಂತೆ ಹೇಳಿದ್ದಾರೆ. ಬಾಲಯ್ಯನ ಹೊಡೆತಕ್ಕೆ ಬೆಚ್ಚಿದ ಮಗು ನಿದ್ರೆಯಿಂದ ಎದ್ದು ಗಾಬರಿಯಿಂದ ನೋಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Related