ಮಸೀದಿಗಳಲ್ಲಿ ಇನ್ಮುಂದೆ ಬೆಳಿಗ್ಗೆ 5 ಗಂಟೆಗೆ ಆಜಾನ್ ಕೂಗದಿರಲು ನಿರ್ದಾರ..!

  • In WORLD
  • May 14, 2022
  • 244 Views

ಧ್ವನಿ ವರ್ಧಕ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಬೆಳಗ್ಗೆ 5 ಗಂಟೆಗೆ ಆಜಾನ್​ ಕೂಗದಿರಲು ನಿರ್ಧರಿಸಲಾಗಿದೆ.

ಸುಪ್ರೀಂ ಕೋರ್ಟ್​ ಆದೇಶದ ಅನುಸಾರವಾಗಿ ಮಸೀದಿಗಳು ಇನ್ಮುಂದೆ ಆಜಾನ್​ ಕೂಗದಿರಲು ಬೆಂಗಳೂರಿನಲ್ಲಿ ನಿರ್ಧರಿಸಿದೆ. ಈ ಸಂಬಂಧ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದು, ಅದರಲ್ಲಿ ಇನ್ಮುಂದೆ ಧ್ವನಿ ವರ್ಧಕದ ಮೂಲಕ ಆಜಾನ್​​ ಕೂಗದಿರಲು ನಿರ್ಧರಿಸಲಾಗಿದೆ.

ಬೆಳಗ್ಗೆ 6 ಗಂಟೆ ಬಳಿಕ ಪೊಲೀಸರ ಅನುಮತಿ ಪಡೆದು ಆಜಾನ್​ ಕೂಗಲು ಅನುಮತಿ ಪಡೆಯಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿ ವರ್ಧಕ ಬಳಕೆ ಮಾಡದಂತೆ ಈಗಾಗಲೇ ಸರ್ಕಾರ ಮತ್ತು ಪೊಲೀಸ್​ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ, ಈ ಸಂಬಂಧ ನೋಟಿಸ್​ ಜಾರಿ ಮಾಡಿದ್ದರೂ ಕೂಡ ಕೆಲಸ ಮಸೀದಿಗಳಲ್ಲಿ ಆಜಾನ್​ ಕೂಗಲಾಗುತ್ತಿತ್ತು. ಈ ಸಂಬಂಧ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿದ್ದವು.

Related