ಶೀಘ್ರದಲ್ಲೇ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಮ್ ನಲ್ಲಿ ಹಣ ಪಡೆಯಿರಿ.!

ಮುಂಬೈ: ಡಿಜಿಟಲೀಕರಣಕ್ಕೆ ಪುಷ್ಠಿ ನೀಡುವ ಮತ್ತೊಂದು ಮಹತ್ವದ ಯೋಜನೆಯನ್ನು ಆರ್ಬಿಐ ಶೀಘ್ರದಲ್ಲೇ ಚಾಲ್ತಿಗೆ ತರಲಿದೆ. ಖಾತೆದಾರರು ಎಟಿಎಂಗಳಲ್ಲಿ ಕಾರ್ಡ್ಗಳನ್ನು ಬಳಸಿ ಹಣ ಪಡೆಯವ ಸಂಪದ್ರಾಯವಿದೆ. ಅದರ ಬದಲಿಗೆ ಮೊಬೈಲ್ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂಗಳಿಂದಲೂ ಹಣವನ್ನು ಪಡೆಯಬಹುದಾದ ಯೋಜನೆ ಕೆಲವೇ ದಿನಗಳಲ್ಲಿ ಬರಲಿದೆ.


ಡಿಜಿಟಲ್ ಯುಗದಲ್ಲಿ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಮೊಬೈಲ್ ಮೂಲಕವಾಗಿ ಅಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂಗಳನ್ನು ಬಳಸಿಕೊಂಡು ಹಣವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇದೀಗ ನೂತನ ಯೋಜನೆಯನ್ನು ತರುವ ಆಲೋಚನೆಯನ್ನು ಹೊಂದಿದೆ. ಇದರ ಪ್ರಕಾರವಾಗಿ ಎಟಿಎಂಗಳಲ್ಲಿ ಹಣ ಪಡೆಯಲು ಕಾರ್ಡ್ಗಳಿಲ್ಲದೇ ಈ ನೂತನ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್ಗಳು ಹಾಗೂ ಎಟಿಎಂ ಆಪರೇಟರ್ಗಳನ್ನು ಆರ್ಬಿಐ ಕೇಳಿದೆ. ಈಗಾಗಲೇ ಹಲವು ಬ್ಯಾಂಕ್ಗಳು ಮೊಬೈಲ್ ಆ್ಯಪ್ಗಳನ್ನು ಉಪಯೋಗಿಸಿಕೊಂಡು ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೇ ಹಣವನ್ನು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

Related