ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಅರವಿಂದ್ ಲಿಂಬಾವಳಿ

ಹುಟ್ಟು ಹಬ್ಬದ ಸಂಭ್ರಮಾಚರಣೆಯಲ್ಲಿ ಅರವಿಂದ್ ಲಿಂಬಾವಳಿ

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕರಾಗಿರುವಂತಹ ಅರವಿಂದ್ ಲಿಂಬಾವಳಿಯವರು ತಾವು ಅಧಿಕಾರದಲ್ಲಿದ್ದಾಗ ಹಲವಾರು ಅಭಿವೃದ್ಧಿಗೆ ಕೆಲಸಗಳನ್ನು ಮಾಡುವುದರ ಜೊತೆಗೆ ತಮ್ಮ ಹುಟ್ಟುಹಬ್ಬಕ್ಕೆ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.

ಅದರಂತೆ ಇಂದು (ಶನಿವಾರ ಫೆಬ್ರವರಿ 01) ರಂದು ಮಾಜಿ ಶಾಸಕರಾಗಿರುವಂತಹ ಅರವಿಂದ್ ಲಿಂಬಾವಳಿ ಅವರ 58ನೇ ಹುಟ್ಟು ಹಬ್ಬದ ಆಚರಣೆಗೆಂದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ಇನ್ನು ಹುಟ್ಟುಹಬ್ಬದ ಅಂಗವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಳಿಶಿವಾಲೆ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಪೆನ್, ಸಿಹಿತಿಂಡಿ ವಿತರಣೆ ಮಾಡಿದರು. ಇದೇ ವೇಳೆ 200 ಮಹಿಳೆಯರಿಗೆ ಸೀರೆ ಹಾಗೂ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಲಾಯಿತು. ಇದನ್ನೂ ಓದಿ: ಭಗತ್ ಸಿಂಗ್ ಉದ್ಯಾನವನ ಉದ್ಘಾಟಿನೆ

ಇದೇ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಭಾಗವಹಿಸಿ, ಅನ್ನ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಅರವಿಂದ್ ಲಿಂಬಾವಳಿಯವರಿಗೆ ಮಹಿಳೆಯರು ವಿದ್ಯಾರ್ಥಿಗಳು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇನ್ನೂ ಹಲವಾರು ಹುಟ್ಟು ಹಬ್ಬದ ಶುಭ ಕೋರಿದರು.

Related