ಬೆಂಗಳೂರು: ಅಧಿವೇಶನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಕ್ ಸಮರ ಜೋರಾಗಿ ನಡೆಯುತ್ತಿದ್ದು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಚೀನಾದ ಚಟುವಟಿಕೆಗಳು ಹಾಗೂ ಪಾಕಿಸ್ತಾನದ ಏಜೆಂಟ್ ಗಳು ಎಂಬ ಸುನಿಲ್ ಕುಮಾರ್ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಅವರು, ಪುಕ್ಕಟೆ ಬಿರಿಯಾನಿ ತಿನ್ನೋದಕ್ಕೆ ಪಾಕಿಸ್ತಾನಕ್ಕೆ ಹೋಗಿ ಬಂದವರು ನರೇಂದ್ರ ಮೋದಿಯವರು ಎಂದು ಪಾಕಿಸ್ತಾನದಲ್ಲಿ ನವಾಬ್ ಶರೀಫ್ ಜೊತೆ ತೆಗೆಸಿಕೊಂಡ ಫೋಟೋವನ್ನು ಸದನದಲ್ಲಿ ಪ್ರದರ್ಶಿಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಎಂದಿಗೂ ಮಹಿಳೆಯರ ಪರ: ಲಕ್ಷ್ಮೀ ಹೆಬ್ಬಾಳಕರ್
ಪಾಕಿಸ್ತಾನದಲ್ಲಿ ಕರೆಯದವರ ಮನೆಗೆ ಹೋಗಿ ಪುಕ್ಕಟಿ ಬಿರಿಯಾನಿ ತಿಂದು ಪಾಕಿಸ್ತಾನದ ನವಾಬ್ ಶರೀಫ್ ಅವರ ಮನೆಯಲ್ಲಿ ಬಿರಿಯಾನಿ ತಿಂದವರು ನಿಮ್ಮ ನರೇಂದ್ರ ಮೋದಿಯವರೆಂದು ಟಕ್ಕರ ನೀಡಿದ್ದಾರೆ.
ಬಿಜೆಪಿ ಅವರೆಲ್ಲ ಪಾಕಿಸ್ತಾನದ ಚೇಳಾಗಳ? ನೀವು ನಮಗೆ ದೇಶಭಕ್ತಿಯ ಪಾಠ ಹೇಳೋಕೆ ಯಾವ ಅರ್ಹತೆಯನ್ನು ಹೊಂದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಇನ್ನು ಈ ಸಂದರ್ಭದಲ್ಲಿ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.