ರೈತ ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ

  • In State
  • November 30, 2024
  • 325 Views
ರೈತ ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ

ಯಾದಗಿರಿ: ಜಿಲ್ಲೆಯ ರೈತರಿಗೆ 2024-25ನೇ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆ ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಕೃಷಿಭಾಗ್ಯ ಯೋಜನೆಯ ಫಲಾನುಭವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ ಅವರು ತಿಳಿಸಿದ್ದಾರೆ.

ಯೋಜನೆಯ ಬೆಳೆ ಪದ್ದತಿ ಆಧಾರಿತ ಪ್ರಾತ್ಯಕ್ಷಿಕೆ, ಪಶು ಸಂಗೋಪನಾ ಘಟಕಗಳು, ಜೇನು ಸಾಗಾಣಿಕೆ, ಎರೆಹುಳು ಗೊಬ್ಬರ ಘಟಕ ಸ್ಥಾಪನೆ, ಕೃಷಿ ಅರಣ್ಯ ಹಾಗೂ ರೇಷ್ಮೆ ಹುಳು ಸಾಗಾಣಿಕ ಘಟಕಗಳನ್ನು ಸ್ಥಾಪಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.50ರ ಸಹಾಯಧನ ಹಾಗೂ ಪ.ಜಾ, ಪ.ಪಂ. ಶೇ.90 ರಷ್ಟು ಸಹಾಯಧನವನ್ನು ನೀಡಲಾಗುವುದು.

ಬಳಿಚಕ್ರ ಹಾಗೂ ಯಾದಗಿರಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯ ರೈತರು ಮಾತ್ರ ಸದರಿ ಯೋಜನೆಗೆ ಅರ್ಹರಿರುವುದರಿಂದ ಆಸಕ್ತ ರೈತರು ಈ ಯೋಜನೆ ಸದುಪಯೋಗ ಪಡೆಯಲು ಅರ್ಜಿ, ಪಹಣಿ ನಕಲು ಪ್ರತಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ ಪುಸ್ತಕ ಹಾಗೂ ಫೋಟೋ ಪ್ರತಿಯನ್ನು ಸಂಬAಧಿಸಿದ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ 2024ರ ಡಿಸೆಂಬರ್ 14ರ ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಳಿಚಕ್ರ ಹಾಗೂ ಯಾದಗಿರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related