ಎಬಿಡಿ ಸಂಸ್ಥೆಯಿಂದ ಆ್ಯಂಬುಲೆನ್ಸ್ ಕೊಡುಗೆ

ಎಬಿಡಿ ಸಂಸ್ಥೆಯಿಂದ ಆ್ಯಂಬುಲೆನ್ಸ್ ಕೊಡುಗೆ

ಶಿಡ್ಲಘಟ್ಟ : ಕೊಟ್ಟ ಮಾತಿನಂತೆ ವರಮಹಾಲಕ್ಷ್ಮಿ ಹಬ್ಬದಂದು ಎಬಿಡಿ ಸಂಸ್ಥೆಯ ಅಧ್ಯಕ್ಷ ಸಮಾಜ ಸೇವಕ ರಾಜೀವ್‌ಗೌಡ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಿದರು.

ನಗರದ ಸೂರ್ಯ ಸಿಲ್ಕ್ ಸಿಟಿಯಲ್ಲಿರುವ ಎಬಿಡಿ ಕಚೇರಿ ಬಳಿ ಸಾಂಕೇತಿಕವಾಗಿ ಎರಡು ಆ್ಯಂಬುಲೆನ್ಸ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅರ್ಪಿಸಿದರು.

ಕೋವಿಡ್ ಮೂರನೇ ಅಲೆ ತಡೆಗೆ ಪಣತೊಟ್ಟ ರಾಜೀವ್‌ಗೌಡ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ದಿನಸಿ ಕಿಟ್ ವಿತರಣೆ, ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಕುಟುಂಬಕ್ಕೆ 10 ಸಾವಿರ ಧನ ಸಹಾಯ, ಅಂಗವಿಕಲರಿಗೆ ಆಸರೆಯಾಗಿ, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಕ್ಷೇತ್ರದ ಜನರ ಅನುಕೂಲಕ್ಕೆ ಆ್ಯಂಬುಲೆನ್ಸ್ ಕೊಡುಗೆ ಮತ್ತು ಬೋರ್ವೆಲ್ ಖರೀದಿಸಿ ಕುಡಿಯುವ ನೀರಿಗೆ ತೊಂದರೆ ಇರುವ ಕಡೆ ಕೊಳವೆ ಬಾವಿ ಕೊರೆಸುವುದಾಗಿ ಹೇಳಿದರು.

ಕೊಟ್ಟ ಮಾತಿನಂತೆ 10 ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಲಾಗುವುದು. ಸಾಂಕೇತಿಕವಾಗಿ ಎರಡು ಆ್ಯಂಬುಲೆನ್ಸ್ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ, ರಾಜೀವ್ ಗೌಡ ತಾವು ನೀಡಿದ್ದ ಭರವಸೆಯನ್ನು ಸಾಬೀತು ಮಾಡಿದರು.

ಕ್ಷೇತ್ರದಲ್ಲಿ ಮಾಡುತ್ತಿದ್ದ ಸಮಾಜ ಸೇವೆಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳುತ್ತಿದ್ದ ರಾಜೀವ್ ಗೌಡ ದಿಢೀರನೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ನೂರಕ್ಕೆ ನೂರರಷ್ಟು ಈ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬಂದೆ ಬರುತ್ತೇನೆ. ಜನರ ಸೇವೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

Related