ಬೆಂಗಳೂರು: ನಾಗಿಣಿ2 ಧಾರಾವಾಹಿ ಮೂಲಕ ಕನ್ನಡದ ಮನೆ ಮಾತಾಗಿದ್ದ ಐಶ್ವರ್ಯ ಸಿಂದೋಗಿ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗುವ ಮೂಲಕ ಮತ್ತಷ್ಟು ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿರುವ ಅವರು, ಮತ್ತೆ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ.
ಯೆಸ್… ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ʼನಿನ್ನ ಜೊತೆ ನನ್ನ ಕಥೆʼ ಸೀರಿಯಲ್ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದೆ. ʼನಿನ್ನ ಜೊತೆ ನನ್ನ ಕಥೆʼ ಧಾರಾವಾಹಿಯಲ್ಲಿ ನೆಗಟಿವ್ ರೋಲಿನಲ್ಲಿ ಐಶ್ವರ್ಯ ಸಿಂದಗಿ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಕನ್ನಡ ವಿರೋಧಿಗೆ ಕನ್ನಡ ಪುಸ್ತಕ ಕೊಟ್ಟ ನಟಿ
ಇನ್ನು ಈ ಕುರಿತು ಸ್ಟಾರ್ ಸುವರ್ಣ ಪ್ರೋಮ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಅಭಿಮಾನಿಗಳು ವಿಧವಿಧ ಕಮೆಂಟ್ಸ್ ಹಾಕುತ್ತಿದ್ದಾರೆ.
