ನಟಿ ‘ಕಿಶೋರಿ ಬಲ್ಲಾಳ್’ ನಿಧನ

ನಟಿ ‘ಕಿಶೋರಿ ಬಲ್ಲಾಳ್’ ನಿಧನ

ಬೆಂಗಳೂರು, ಫೆ. 18: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಎಂದೇ ಗುರ್ತಿಸಿಕೊಂಡಿದ್ದ ಕಿಶೋರಿ ಬಲ್ಲಾಳ್ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು ಕನ್ನಡ ಸೇರಿದಂತೆ ವಿವಿಧ ಭಾಷೆಯಗಳಲ್ಲಿ ತಮ್ಮದೇ ಆದಂತ ನಟನೆಯ ಮೂಲಕ ಗಮನ ಸೆಳೆದಿದ್ದ ಹಿರಿಯ ನಟಿ ಅಂದ್ರೇ ಅದು ಕಿಶೋರಿ ಬಲ್ಲಾಳ್. ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಚಿತ್ರಗಳು ಸೇರಿದಂತೆ ವಿವಿಧ ಬಗೆಯಲ್ಲಿ ನಟಿಸಿದ್ದ ಕಿಶೋರಿ ಬಲ್ಲಾಳ್, ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು.

1960ರಲ್ಲಿ ತೆರೆಕಂಡ ‘ಇವಳೆಂತಾ ಹೆಂಡತಿ’ ಸಿನಿಮಾ ಮೂಲಕ ಕಿಶೋರಿ ಬಲ್ಲಾಳ್​ ಬಣ್ಣದ ಬದುಕು ಆರಂಭಿಸಿದ್ದರು.  ಇವರು  70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ಶಾರುಖ್ ಖಾನ್ ಜತೆ ‘ಸ್ವದೇಸ್​​’ ಚಿತ್ರದಲ್ಲಿ ಅಭಿನಯಿಸಿದ್ದರು. ಕನ್ನಡದ ‘ಸ್ಪರ್ಶ’, ‘ನಮ್ಮಣ್ಣ’, ‘ಗಲಾಟೆ’, ‘ಕೆಂಪೆಗೌಡ’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದರು. ಅವರ ಸಾವಿಗೆ ಕನ್ನಡ ಚಿತ್ರರಂಗದ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ. ಅವರ ಅಂತಿಮ ಕ್ರಿಯೆ ಎಲ್ಲಿ, ಯಾವಾಗ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

 

Related