ಎಸಿ ಕಚೇರಿಯ ಪೀಠೋಪಕರಣ ಜಪ್ತಿ

ಎಸಿ ಕಚೇರಿಯ ಪೀಠೋಪಕರಣ ಜಪ್ತಿ

ಜಮಖಂಡಿ : ತಾಲ್ಲೂಕಿನ ಗೋಠೆ ಗ್ರಾಮದ ರೈತರ ಜಮೀನನ್ನು ಕೆರೆ ನಿರ್ಮಾಣಕ್ಕೆ ಸ್ವಾಧೀನಗೊಳಿಸಿಕೊಂಡಿದ್ದು, ಭೂಸ್ವಾಧೀನಕ್ಕೊಳಗಾದ ಜಮೀನಿನ ರೈತರಿಗೆ ಸೂಕ್ತ ಪರಿಹಾರ ನೀಡದೇ ಇರುವುದನ್ನು ಅವಲೋಕಿಸಿದ ನ್ಯಾಯಾಲಯ ಜಮಖಂಡಿ ಉಪವಿಭಾಗಾಧಿಕಾರಿ ಕಚೇರಿಯ ಪಿಠೋಪಕರಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದ್ದು, ಅದರಂತೆ ನ್ಯಾಯಾಲಯದ ಸಿಬ್ಬಂದಿ ಸೋಮವಾರ ಎಸಿ ಕಚೇರಿಯಲ್ಲಿ 3 ಕಂಪ್ಯೂಟರ್, ಒಂದು ಪ್ರಿಂಟರ್, ಒಂದು ಝರಾಕ್ಸ್ ಮಶೀನ ಹಾಗೂ ಇತರೆ ಪಿಠೋಪಕರಣಗಳನ್ನು ಜಪ್ತಿ ಮಾಡಿ ನ್ಯಾಯಾಲಯ ವಶಕ್ಕೆ ನೀಡಿದೆ. ಪ್ರಕರಣದ ಹಿನ್ನಲೆ-ಜಮಖಂಡಿ ತಾಲ್ಲೂಕಿನ ಗೋಠೆ ಗ್ರಾಮದ ಬಳಿ ಜಿನುಗು ಕೆರೆ ನಿರ್ಮಾಣಕ್ಕಾಗಿ ಅಲ್ಲಿನ ರೈತರ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಸುಮಾರು 5 ಎಕರೆ ಜಮೀನಿಗೆ ಹೆಚ್ಚುವರಿ ಭೂ ಪರಿ ಹಾರಧನ ನೀಡುವಂತೆ ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ 2017 ಅ.23 ರಂದು ನೀಡಿರುವ ತೀರ್ಪಿನಂತೆ ಭೂ ಮಾಲೀಕರಿಗೆ ಹೆಚ್ಚುವರಿ ಭೂ ಪರಿಹಾರಧನ 55,28,009 ರು,ಗಳನ್ನು ಬಿಡುಗಡೆಗೊಳಿಸುವಂತೆ ತಿಳಿಸಿತ್ತು. ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸುವ ಅಧಿಕಾರಿ ಅಥವಾ ನೌಕರರು ತಮ್ಮ ಸ್ವಂತ ಖರ್ಚಿನಲ್ಲಿ ಬಡ್ಡಿ ನೀಡಬೇಕು. ಈ ವೆಚ್ಚವನ್ನು ಆಯವ್ಯಯ ಲೆಕ್ಕ ಶಿರ್ಷಿಕೆಯಡಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಗೆ ಅನುದಾನ ಬಿಡುಗಡೆ ಮಡು ವಂತೆ ರಾಜ್ಯ ಸರ್ಕಾರದ ಆಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ತಾಲ್ಲೂಕಿನ ಗೋಟೆ ಗ್ರಾಮದ ಭೂಮಾಲೀಕ ಗದಿಗೆಪ್ಪ ನಾಗೇಶ್ವರ, ಭೀಮಪ್ಪ ಸಂಗಪ್ಪ ಹನಗಂಡಿ, ಸುರೇಶ ಕಂಬಾಗಿ, ನಿಂಗಪ್ಪ ತಳಸಂಗ ಸೇರಿದಂತೆ ರೈತರಿಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಪರಿಹರಧನ ಬಿಡುಗಡೆ ಬಗ್ಗೆ ಪತ್ರ ಮುಖೇನ ತಿಳಿಸಿದ್ದು,ಇಲ್ಲಿನ ಉಪವಿಭಾಗಾಧಿಕಾರಿ ಹಣ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ.

ಹಣ ಜಮಾವಣೆಯಾಗಿಲ್ಲ-ಉಪವಿಭಾಗಾಧಿಕಾರಿ ಕಚೇರಿಯ ಸಂಬಂಧಿಸಿದ ನೌಕರರ ಪ್ರಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ ಇನ್ನೂವರೆಗೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರದ ಕೆ-2 ತಾಂತ್ರಿಕ ತೊಂದರೆಯಿಂದ ಹಣ ಜಮಾವಣೆಗೊಂಡಿಲ್ಲವೆಂದು ತಿಳಿಸಿದ್ದಾರೆ.

ಸರ್ಕಾರದ ಈ ದ್ವಂದ ನೀತಿ, ಅಡಳಿತ ವೈಖರಿಯಿಂದಾಗಿ ಕಳೆದ 4-5 ವರ್ಷಗಿಳಿಂದ ರೈತರು ಭೂಮಿ ಕಳೆದುಕೊಂಡು ನ್ಯಾಯಾಲಯ-ಕಚೇರಿಗೆ ಅಲೆ ದಾಡುವ ಸ್ಥಿತಿ ಬಂದೊದಾಗಿದೆಂದು ವಕೀಲ ಉಮೇಶ ಸಿಂಧೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related