ಅಭಿಜ್ಞಾನ ಶಾಕುಂತಲಾ ಪೌರಾಣಿಕ ನಾಟಕ..

ಅಭಿಜ್ಞಾನ ಶಾಕುಂತಲಾ ಪೌರಾಣಿಕ ನಾಟಕ..

ಬೆಂಗಳೂರು,ಜು 26 : ದಿನಾಂಕ 23/7/2022 ರಂದು ಕಲಾಸಂಘಗಳ ಸಂಯುಕ್ತಾಶ್ರಯದಲ್ಲಿ  ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ರಂಗಸೌರಭ – 50 ಸಂಭ್ರಮಾಚರಣೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಅಭಿಜ್ಞಾನ ಶಾಕುಂತಲಾ ಎಂಬ ಸುಂದರ ಪೌರಾಣಿಕ ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಯಿತು . ಈ ಕಾರ್ಯಕ್ರಮವನ್ನು  ಶ್ರೀ.ಎ.ಎಸ್ . ಜಯರಾಮ್ ( ಮಸಾಲೆ ) ರವರು , ತುರುವೇಕೆರೆ ಜನಪ್ರಿಯ ಶಾಸಕರು ಉದ್ಘಾಟಿಸಿದರು.

ಶ್ರೀ.ಎ.ಎಸ್ . ಜಯರಾಮ್ ರವರಿಂದ ದೇವಿಹಳ್ಳಿ ಮಂಜಣ್ಣ ರವರಿಗೆ ಗೌರವಿಸಲಾಯಿತು. ಮಿತ್ರರಾದ ಖ್ಯಾತ ಕಲಾವಿದ ದೇವಿಹಳ್ಳಿ ಮಂಜಣ್ಣ ನಾಟಕವನ್ನು ನಿರ್ದೇಶಿಸಿ ದುಷ್ಯಂತ ಪಾತ್ರದಲ್ಲಿ ಅಭಿನಯಿಸಿದರು ಮತ್ತು ಖ್ಯಾತ ನೃತ್ಯಗಾರ್ತಿ ಸುಮಕಂಠಿ ಅವರು ಶಾಕುಂತಲ ಪಾತ್ರದಲ್ಲಿ ಅಭಿನಯಿಸಿದರು. ಪೌರಾಣಿಕ ರಂಗಭೂಮಿಯ ಅನೇಕ ಮಿತ್ರರು ಹಾಗೂ ಅಭಿಜಾತ ಕಲಾವಿದರು ರಂಗದಲ್ಲಿದ್ದರು.

Related