ಪ್ರತಿ ಜಿಲ್ಲೆಯ ಪಕ್ಷದ ಕಾರ್ಯಾಲಯಕ್ಕೆ ಭೇಟಿ; ಎಸ್ ಟಿ ಎಸ್

ಪ್ರತಿ ಜಿಲ್ಲೆಯ ಪಕ್ಷದ ಕಾರ್ಯಾಲಯಕ್ಕೆ ಭೇಟಿ; ಎಸ್ ಟಿ ಎಸ್

ಕೊಡುಗು: ಸಾಮಾನ್ಯವಾಗಿ ನಾನು ಯಾವ ಜಿಲ್ಲೆಯ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಯ ಬಿಜೆಪಿಯ ಕಚೇರಿಗೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರದ ಮುಖ್ಯ ಕಾರ್ಯಕ್ರಮಗಳು ಹಾಗೂ ನಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಅವರು ಕೊಡಗು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿ, ಪಕ್ಷದ ಕಚೇರಿಗೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾಗಿ ತಿಳಿಸಿದರು.

ಕೋಆಪರೇಟಿವ್ ನಾಮಿನೈಶನ್ ಗೆ ಸಂಬಂಧಪಟ್ಟಂತೆ ಪಕ್ಷದ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು ಇಲ್ಲವೇ ಸಂಸದರಿಂದ ಪತ್ರ ತಂದರೆ ಮಾಡಿಕೊಡುತ್ತೇನೆ. ಅಲ್ಲದೆ, ನನ್ನ ಇಲಾಖೆಗೆ ಸಂಬಂಧಪಟ್ಟ ಇನ್ನಿತರ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ನಾನು ಬಗೆಹರಿಸಿಕೊಡುತ್ತೇನೆ ಎಂದು ಸಚಿವರು ತಿಳಿಸಿದರು.

ರೈತರ ಸಾಲ ಮರುಪಾವತಿ  ಅವಧಿ ವಿಸ್ತರಣೆ ತೀರ್ಮಾನ ೨-೩ ದಿನಗಳಲ್ಲಿ ಪ್ರಕಟ; ಸಚಿವ ಎಸ್ ಟಿ ಎಸ್

* ಪ್ರಸಕ್ತ ಸಾಲಿನಲ್ಲಿ ೧೪,೫೦೦ ಕೋಟಿ ಸಾಲ ನೀಡಲು ಚಾಲನೆ

* ಮುಂದಿನ ಸಾಲಿನಲ್ಲಿ ರೈತರಿಗೆ ೨೦ ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಇದ್ದು, ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ

Related