ಬಡತನದಲ್ಲಿ ಅರಳಿದ ಪ್ರತಿಭೆ

ಬಡತನದಲ್ಲಿ ಅರಳಿದ ಪ್ರತಿಭೆ

ಚಿಂಚೋಳಿ : ಪ್ರತಿಭಾವಂತ ಗಾಯಕ ಸೂರ್ಯಕಾಂತ್ ಕನ್ನಡದಲ್ಲಿ ಪ್ರಸಾರವಾಗುವ ಕಲರ್ಸ್ ಕನ್ನಡದ ಎದೆ ತುಂಬಿ ಹಾಡುವೆನು ಎಂಬ ಕಾರ್ಯಕ್ರಮದಲ್ಲಿ ಪ್ರಪ್ರಥಮವಾಗಿ ಆಯ್ಕೆಯಾಗಿರುತ್ತಾರೆ.

ಇವರೇ ಸೂರ್ಯಕಾಂತ್. ಇವರು ಚಿಂಚೋಳಿ ತಾಲೂಕಿನ ಗಡಿನಿಂಗದಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು ಕಡು ಬಡತನದಲ್ಲಿದ್ದು ಯಾರದೂ ಕೂಡ ಸಹಾಯವಿರದೆ ತಮ್ಮ ಗಾಯನ ಪ್ರತಿಭೆಯಿಂದಲೇ ಇಂದು ಈ ಮಟ್ಟಕ್ಕೆ ತಲುಪಿದ್ದಾರೆ.

ಇವರ ತಾಯಿ ಶರಣಮ್ಮ ನಮ್ಮ ಪ್ರಜಾವಾಹಿನಿ ದಿನ ಪತ್ರಿಕೆ ಕನ್ನಡಕ್ಕೆ ಸಂದರ್ಶನ ನೀಡಿ ಮಾತನಾಡುತ್ತಾ ನಾನು ಕೂಲಿ ನಾಲಿ ಮಾಡಿ ನನ್ನ ಮಗನಿಗೆ ವಿದ್ಯಾಭ್ಯಾಸ ಮತ್ತು ಗಾಯನಕ್ಕೆ ಹಣ ಒದಗಿಸುತ್ತಿದ್ದೆ. ನನ್ನ ಮಗನಿಗೆ ಯಾರಿಂದಲೂ ಕೂಡ ಸಹಾಯ ಸಿಕ್ಕಿಲ್ಲ ಈ ಮಟ್ಟಕ್ಕೆ ಬೆಳೆದಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ನಮ್ಮ ಪ್ರಜಾವಾಹಿನಿ ದಿನ ಪತ್ರಿಕೆಗೆ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕಾಡುತ್ತಿರುವ ಬಡತನದಲ್ಲಿ ಕಷ್ಟಪಟ್ಟು ಬೆಳೆದ ಸೂರ್ಯಕಾಂತ್ ಎಂಬ ಬಡ ಕಲಾವಿದನ ಸಹಾಯಕ್ಕೆ ಸ್ಥಳೀಯ ಸಂಸ್ಥೆಗಳು ಹೃದಯವಂತ ಸಮಾಜ ಸೇವಕರು ಮಹಾದಾನಿಗಳು ಅಲ್ಲದೆ ಕ್ಷೇತ್ರದ ಶಾಸಕ ಡಾ ಅವಿನಾಶ್ ಜಾಧವ್, ಸಂಸದ ಭಗವಂತ ಖೂಬಾ, ಸಂಸದ ಡಾ ಉಮೇಶ್ ಜಾಧವ್ ಹಾಗೂ ಇತರೆ ಪಕ್ಷದ ಮುಖಂಡರು ಜನಪ್ರತಿನಿಧಿನಗಳು ಮುಂದೆ ಬಂದು ಜಿಲ್ಲೆ ತಾಲೂಕು ಗ್ರಾಮಕ್ಕೆ ಕೀರ್ತಿ ತರುವ ಈ ಬಡ ಕಲಾವಿದನಿಗೆ ಸಹಾಯ ಮಾಡುವ ಜೊತೆಗೆ ಪ್ರೋತ್ಸಾಹ ನೀಡಬೇಕು ಎಂದರು.

Related